Select Your Language

Notifications

webdunia
webdunia
webdunia
webdunia

ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್: ಮುಳುಗಲಿದೆ ಮಂಗಳೂರು, ಮುಂಬೈ!

ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್: ಮುಳುಗಲಿದೆ ಮಂಗಳೂರು, ಮುಂಬೈ!
ನವದೆಹಲಿ , ಬುಧವಾರ, 11 ಆಗಸ್ಟ್ 2021 (08:52 IST)
ನವದೆಹಲಿ(ಆ.11): ಇನ್ನೊಂದು ದಶಕದಲ್ಲಿ ಭೂಮಿಯ ತಾಪಮಾನ ಅಂದಾಜು ಮಟ್ಟಕ್ಕಿಂತ ಏರಿಕೆಯಾಗಲಿದೆ ಎಂದು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ವರದಿ ಎಚ್ಚರಿಸಿದ ಬೆನ್ನಲ್ಲೇ, ಶತಮಾನದ (2100ನೇ ಇಸವಿ) ಒಳಗಾಗಿ ಮಂಗಳೂರು ಸೇರಿದಂತೆ ಭಾರತದ ಸಮುದ್ರದಂಚಿನ 12 ನಗರಗಳು ಮುಳುಗಲಿವೆ ಎಂಬ ಮತ್ತೊಂದು ಆಘಾತಕಾರಿ ಎಚ್ಚರಿಕೆ ಸಂದೇಶ ಬಂದಿದೆ.

ವಿಶ್ವಸಂಸ್ಥೆಯ ವರದಿಯನ್ನಾಧರಿಸಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ವರದಿ ಬಿಡುಗಡೆ ಮಾಡಿದೆ.
ಯಾವ ನಗರಗಳು ಮುಳುಗುತ್ತವೆ:
ಮಂಗಳೂರು, ಮುಂಬೈ, ಮರ್ಮಗೋವಾ, ಕೊಚ್ಚಿ, ಪಾರಾದೀಪ್, ಖಿದೀರ್ಪುರ, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಅಪಾಯದಲ್ಲಿವೆ. ಜಗತ್ತಿನಾದ್ಯಂತ ಸಮುದ್ರ ಮಟ್ಟದಲ್ಲಾಗುತ್ತಿರುವ ಬದಲಾವಣೆಯನ್ನು ಆಧರಿಸಿ ಈ ವರದಿ ನೀಡಲಾಗಿದೆ. ಈಗಿನ ಟ್ರೆಂಡ್ ಪ್ರಕಾರ ಸಮುದ್ರ ಏರಿದರೆ 2 ಅಡಿಯಷ್ಟುಏರಲಿದೆ. ಶತಮಾನದ ಅಂತ್ಯದೊಳಗೆ ಇದು ಮತ್ತಷ್ಟುತೀವ್ರಗೊಂಡರೆ, 2100ರ ಅಂತ್ಯಕ್ಕೆ 3 ಅಡಿಯಷ್ಟು ಸಮುದ್ರ ಮಟ್ಟಏರಿಕೆಯಾಗಿ ಈ ನಗರಗಳು ಮುಳುಗಲಿವೆ ಎಂದು ತಿಳಿಸಿದೆ.
ವಿಶ್ವಸಂಸ್ಥೆಯ ಈ ಸಮಿತಿಯು 1988ರಿಂದ ಪ್ರತಿ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಸಮುದ್ರಮಟ್ಟ, ಹಸಿರು ಮನೆ ಅನಿಲ ಪರಿಣಾಮ, ಮಂಜು ಕರಗುವಿಕೆ ಕುರಿತ ವರದಿ ನೀಡುತ್ತಿದೆ.
ಕರಾವಳಿ ನಗರಗಳೇಕೆ ಅಪಾಯದಲ್ಲಿವೆ?:
ವರದಿ ಪ್ರಕಾರ ಏಷ್ಯಾದ ಸುತ್ತಮುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ಈ ಹಿಂದೆ ಸಮುದ್ರ ಮಟ್ಟದಲ್ಲಿ ಇಂಥ ತೀವ್ರ ಬದಲಾವಣೆಗಳು ಪ್ರತಿ 100 ವರ್ಷಕ್ಕೊಮ್ಮೆ ಕಾಣಬಹುದಿತ್ತು. ಆದರೆ ಇನ್ಮುಂದೆ 2050ರ ಒಳಗಾಗಿ ಪ್ರತಿ 6ರಿಂದ 9 ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ವರೆಗೆ ನಡೆಸಿದ ಅಧ್ಯಯನದ ಅಂದಾಜಿನ ಪ್ರಕಾರ ಜಾಗತಿಕ ಸರಾಸರಿ ಸಮುದ್ರ ಮಟ್ಟಪ್ರತಿ ವರ್ಷ ಸುಮಾರು 3.7 ಮಿಲಿಮೀಟರ್ನಷ್ಟುಏರಿಕೆಯಾಗುತ್ತಿದೆ.
ಉ.ಕನ್ನಡ, ಉಡುಪಿ ಜಿಲ್ಲೆಗೂ ಅಪಾಯ
ನಾಸಾದ ಸಂದೇಶದ ಪ್ರಕಾರ ಕರ್ನಾಟಕದಲ್ಲಿ ಮಂಗಳೂರಷ್ಟೇ ಅಲ್ಲ, ಕರಾವಳಿಗೆ ಹೊಂದಿಕೊಂಡಿರುವ ಉಡುಪಿ ಜಿಲ್ಲೆಯ ಕಡಲ ತಡಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಗೋಕರ್ಣ, ಕಾರವಾರ ಕಡಲ ತೀರಗಳಿಗೂ ಮುಳುಗಡೆಯ ಅಪಾಯ ಕಾದಿದೆ ಎಂದು ವಿಶ್ಲೇಷಿಸಬಹುದಾಗಿದೆ.
ಮುಳುಗುವ 12 ನಗರಗಳು
ನಗರ ಏರಲಿರುವ ಸಮುದ್ರ ಮಟ್ಟ
ಮಂಗಳೂರು 1.87 ಅಡಿ
ಮುಂಬೈ 1.90 ಅಡಿ
ಮರ್ಮಗೋವಾ 2.06 ಅಡಿ
ಕೊಚ್ಚಿ 2.32 ಅಡಿ
ಪಾರಾದೀಪ್ 1.93 ಅಡಿ
ಖಿದೀರ್ಪುರ್ 0.49 ಅಡಿ
ವಿಶಾಖಪಟ್ಟಣಂ 1.77ಅಡಿ
ಚೆನ್ನೈ 1.87 ಅಡಿ
ತೂತ್ತುಕುಡಿ 1.9 ಅಡಿ
ಕಾಂಡ್ಲಾ 1.87 ಅಡಿ
ಒಖಾ 1.96 ಅಡಿ
ಭಾವನಗರ 2.70 ಅಡಿ


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಬೆನ್ನಲ್ಲೇ ಕಾಲೇಜುಗಳಿಗೆ ವಿದ್ಯಾರ್ಥಿಗಳ ದೌಡು