Publish Date: Thu, 30 Nov 2023 (09:30 IST)
Updated Date: Thu, 30 Nov 2023 (09:33 IST)
ಪುತ್ರಿಯ ಗೆಳತಿಯ ಕುಟುಂಬವರು ತಮ್ಮ ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಯುವತಿಯೊಬ್ಬಳ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಸಾನ್ವಿ ಮತ್ತು ಸೀಮಾ ಎನ್ನುವ ಇಬ್ಬರು ಯುವತಿಯರು ಸಾಸಾರಾಮ್ ಮಂದಿರದಲ್ಲಿ ವಿವಾಹವಾಗಿ ಹೋಟೆಲ್‌ನಲ್ಲಿ ಕೋಣೆ ಪಡೆದು ವಾಸಿಸುತ್ತಿರುವ ಘಟನೆ ಬಹಿರಂಗವಾದ ನಂತರ ಪೊಲೀಸರು ದಾಳಿ ನಡೆಸಿ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ಸಲಿಂಗಕಾಮಿಗಳಾದ ಯುವತಿಯರು ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಬೈಲ್ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಇಬ್ಬರು ಯುವತಿಯರು ವಾಸಿಸುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಯುವತಿಯರನ್ನು ವಶಕ್ಕೆ ಪಡೆದಿದ್ದು, ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಎನ್.ಕೆ.ರಜಾಕ್ ಹೇಳಿದ್ದಾರೆ.
ಬಾಲ್ಯದ ಗೆಳತಿಯರಾಗಿದ್ದ ಯುವತಿಯರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಮನೆಯಿಂದ ಓಡಿ ಹೋಗಿ ಆಕ್ಟೋಬರ್ 4 ರಂದು ಸಾಸಾರಾಮ್ ಮಂದಿರದಲ್ಲಿ ವಿವಾಹವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.