Select Your Language

Notifications

webdunia
webdunia
webdunia
webdunia

ಕಾಲೇಜಿನ ಫೀಸ್ ಕೊಡಲು ತಂದೆ ನಿರಾಕರಿಸಿದ್ದಕ್ಕೆ ಸಜೀವವಾಗಿ ದಹಿಸಿಕೊಂಡ ಪುತ್ರಿ

ಯುವತಿ
ಉದಯಪುರ್ , ಗುರುವಾರ, 18 ಆಗಸ್ಟ್ 2016 (17:15 IST)
ಕಾಲೇಜಿನ ಫೀಸ್ ಕೊಡಲು ತಂದೆ ನಿರಾಕರಿಸಿದ್ದರಿಂದ 18 ವರ್ಷದ ಹದಿಹರೆಯದ ಯುವತಿಯೊಬ್ಬಳು ಸಜೀವವಾಗಿ ದಹಿಸಿಕೊಂಡು ಸಾವನ್ನಪ್ಪಿದ ದಾರುಣ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
 
ಪಿಯುಸಿ ದ್ವಿತಿಯ ತರಗತಿಯಲ್ಲಿ ಓದುತ್ತಿದ್ದ ಶಿಲ್ಪಾ ಕುಮಾರ್, ತಂದೆ ಕಾಲೇಜಿನ ಫೀಸ್ ಕೊಡಲು ನಿರಾಕರಿಸಿದ್ದರಿಂದ ಅಸಮಾಧಾನಗೊಂಡು ಮನೆಯಲ್ಲಿದ್ದ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಸುಟ್ಟ ಗಂಭೀರ ಗಾಯಗಳಿಂದ ನರಳುತ್ತಿದ್ದ ಶಿಲ್ಪಾಳನ್ನು ಹತ್ತಿರದಲ್ಲಿರುವ ರಿಷಭದೇವ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರಿಂದ ಆಕೆಯನ್ನು ಉದಯಪುರದ ಪ್ರತಿಷ್ಠಿತ ಎಂಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ವೈದ್ಯರು ಶಿಲ್ಪಾಳಿಗೆ ತುರ್ತು ಚಿಕಿತ್ಸೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಿನ್ನೆ ರಾತ್ರಿ ಸಾವನ್ನಪ್ಪಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಯುವತಿ ಶಿಲ್ಪಾಳ ದೇಹದ ಪೋಸ್ಟ್ ಮಾರ್ಟಂ ನಂತರ ಆಕೆಯ ಶವವನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಾನು ತೆಪ್ಪಗಿರುವುದಿಲ್ಲ ಎಂಬ ಸೂಚನೆ ನೀಡಿದ ಸ್ವಾಮಿ