Select Your Language

Notifications

webdunia
webdunia
webdunia
webdunia

ಪ್ರೇಯಸಿಯನ್ನು ಸಜೀವವಾಗಿ ದಹಿಸಿ ಪ್ರಿಯಕರ ಎಸ್ಕೇಪ್

ಪ್ರೇಯಸಿಯನ್ನು ಸಜೀವವಾಗಿ ದಹಿಸಿ ಪ್ರಿಯಕರ ಎಸ್ಕೇಪ್

ramkrishna puranik

ಹೈದರಾಬಾದ್ , ಶುಕ್ರವಾರ, 22 ಡಿಸೆಂಬರ್ 2017 (17:23 IST)
ಪ್ರಿಯಕರನೊಬ್ಬ ಕೋಪದ ಭರದಲ್ಲಿ ಪ್ರೇಯಸಿಯ ಮೈಮೇಲೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹಿಸಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. 
25 ವರ್ಷದ ಯುವತಿಯ ಮೇಲೆ ಆರೋಪಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಲ್ಲಿನ ಗಾಂಧಿ ಜನರಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.
 
 ಲಾಲಾಗುಡಾದ ನಿವಾಸಿಯಾಗಿರುವ ಮೃತಪಟ್ಟ ಸಂಧ್ಯಾ ರಾಣಿ, ರಸ್ತೆಯಲ್ಲಿ ನಡೆಯುತ್ತಿರುವಾಗ, ಆಕೆಯ ಪ್ರಿಯಕರ ಹಿಂಬದಿಯಿಂದ ಬಂದು ಆಕೆಯ ಮೇಲೆ ಸೀಮೆಎಣ್ಣೆಯನ್ನು ಸುರಿದ ನಂತರ ಬೆಂಕಿ ತಗುಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. 
 
ಸಂಧ್ಯಾ ಈ ಘಟನೆಯಲ್ಲಿ ಶೇಕಡಾ 70 ರಷ್ಟು ಸುಟ್ಟು ಹೋಗಿದ್ದಾಳೆ. ತನ್ನನ್ನು ಸುಟ್ಟಿದ್ದು ಕಾರ್ತಿಕ್ ಎಂಬುದಾಗಿ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕಳೆದ ಕೆಲವು ದಿನಗಳಿಂದ ಕಾರ್ತಿಕ್ ತನಗೆ ಕಿರುಕುಳ ನೀಡುತ್ತಿರುವುದಾಗಿ ಅವಳು ತಿಳಿಸಿದ್ದಾಳೆ.
 
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಾರ್ತಿಕ್, ಸಂಧ್ಯಾಳಿಗೆ ಪರಿಚಿತ ವ್ಯಕ್ತಿಯಾಗಿದ್ದು ಮತ್ತು ಅವಳು ಕೆಲಸ ಮಾಡುತ್ತಿದ್ದ ಅಲ್ಯೂಮಿನಿಯಂ ಆರ್ಟಿಕಲ್ಸ್ ಕಂಪನಿಯಲ್ಲೇ ಅವನು ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಲಿಭಿಸಿದೆ. 
 
ಮೃತ ಸಂಧ್ಯಾಳ ಹೇಳಿಕೆಯನ್ನು ಆಧರಿಸಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದಲ್ಲಿಯೇ ಇದು ಅತಿ ಚಿಕ್ಕ ಮೊಬೈಲ್