Select Your Language

Notifications

webdunia
webdunia
webdunia
webdunia

ಆರ್ಥಿಕತೆ ಮತ್ತಷ್ಟು ಕುಸಿತ: ಕನಿಷ್ಠ ಮಟ್ಟಕ್ಕಿಳಿದ ಜಿಡಿಪಿ

ಆರ್ಥಿಕತೆ ಮತ್ತಷ್ಟು ಕುಸಿತ: ಕನಿಷ್ಠ ಮಟ್ಟಕ್ಕಿಳಿದ ಜಿಡಿಪಿ
ಬೆಂಗಳೂರು , ಶನಿವಾರ, 30 ನವೆಂಬರ್ 2019 (09:21 IST)
ನವದೆಹಲಿ: ದೇಶದ ಆರ್ಥಿಕತೆ ಮತ್ತಷ್ಟು ಕೆಳಹಂತಕ್ಕೆ ಜಾರಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.5 ಕ್ಕೆ ಕುಸಿದಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಳಪೆಯಾಗಿದೆ.


ಮೊದಲ ತ್ರೈಮಾಸಿಕದಲ್ಲಿ ಶೇ. 5 ಜಿಡಿಪಿ ಇತ್ತು. ಕೇಂದ್ರ ಸರ್ಕಾರ ಸಾಂಖ್ಯಿಕ ಸಚಿವಾಲಯ ಈ ಅಂಕಿ ಅಂಶ ಬಿಡುಗಡೆ ಮಾಡಿದೆ. ಇದು ಹೀಗೇ ಮುಂದುವರಿದರೆ ವೇಗವಾಗಿ ಪ್ರಗತಿ ಕಾಣುವ ದೇಶಗಳ ಪಟ್ಟಿಯಲ್ಲೂ ಭಾರತ ಹಿನ್ನಡೆ ಅನುಭವಿಸಲಿದೆ.

ಷೇರುಪೇಟೆಗೂ ಇದರ ಬಿಸಿ ತಾಗಿದ್ದು, ಶುಕ್ರವಾರ ಏಕಾಏಕಿ ಹಿನ್ನಡೆ ಅನುಭವಿಸಿದೆ. ಷೇರುದಾರರು ಹೂಡಿಕೆಗೆ ನಿರಾಸಕ್ತಿ ತೋರಿದ್ದಾರೆ. ಸಹಜವಾಗಿಯೇ ಈ ಬಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರದ ನೀತಿಗಳೇ ಇದಕ್ಕೆಲ್ಲಾ ಕಾರಣ. ಜಿಡಿಪಿ ದರ ಈ ಮಟ್ಟಿಗೆ ಕುಸಿತ ಕಂಡಿರುವುದು ಕಳವಳಕಾರಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯನ್ನು ಚುಡಾಯಿಸಿದ ಪಾಪಿಗಳು - ಮುಂದೆ ಆಗಿದ್ದೇನು? ಶಾಕಿಂಗ್