Select Your Language

Notifications

webdunia
webdunia
webdunia
webdunia

ಸಾಕಷ್ಟು ವಾಹನಗಳಿಗೆ ಗೇಟ್‌ಪಾಸ್‌: ನಿತಿನ್ ಗಡ್ಕರಿ

ಸಾಕಷ್ಟು ವಾಹನಗಳಿಗೆ ಗೇಟ್‌ಪಾಸ್‌:  ನಿತಿನ್ ಗಡ್ಕರಿ
ನವದೆಹಲಿ , ಮಂಗಳವಾರ, 31 ಜನವರಿ 2023 (10:37 IST)
ನವದೆಹಲಿ : 15 ವರ್ಷಕ್ಕಿಂತ ಹಳೆಯದಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರಿಗೆ ನಿಗಮಗಳು, ಸಾರ್ವಜನಿಕ ವಲಯದ ಉದ್ಯಮಗಳ ಒಡೆತನದ 9 ಲಕ್ಷಕ್ಕೂ ಹೆಚ್ಚು ವಾಹನಗಳು ಏಪ್ರಿಲ್ 1ರಿಂದ ರಸ್ತೆಗಿಳಿಯುವುದಿಲ್ಲ.

ಅವುಗಳು ಸೇವೆಯಿಂದ ಹೊರಗುಳಿಯಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಉದ್ಯಮ ಸಂಸ್ಥೆ ಎಫ್ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಳೆಯ ವಾಹನಗಳ ಬದಲಿಗೆ ಹೊಸ ವಾಹನಗಳು ರಸ್ತೆಗಿಳಿಯಲಿವೆ.

ಎಥೆನಾಲ್, ಮೆಥನಾಲ್, ಬಯೋ-ಸಿಎನ್ಜಿ, ಬಯೋ-ಎಲ್ಎನ್ಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸುಗಮಗೊಳಿಸಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. 

ನಾವು ಈಗ 15 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಒಂಭತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮೋದಿಸಿದ್ದೇವೆ. ಮಾಲಿನ್ಯಕಾರಕ ಬಸ್ಗಳು ಮತ್ತು ಕಾರುಗಳು ರಸ್ತೆಯಿಂದ ಹೊರಗುಳಿಯುತ್ತವೆ. ಪರ್ಯಾಯ ಇಂಧನಗಳೊಂದಿಗೆ ಹೊಸ ವಾಹನಗಳು ರಸ್ತೆಗಿಳಿಯಲಿವೆ. ಇದು ವಾಯುಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ಚಲನದ ಮೇಲೆ ಗುಪ್ತಚರ ಇಲಾಖೆ ಕಣ್ಣು