Select Your Language

Notifications

webdunia
webdunia
webdunia
webdunia

ಪ್ರೀತಿಸಿದ ಯುವತಿ ಮೇಲೆ ಪ್ರಿಯಕರನ ಗೆಳೆಯರಿಂದಲೇ ಗ್ಯಾಂಗ್‌ರೇಪ್

ಪ್ರೀತಿಸಿದ ಯುವತಿ ಮೇಲೆ ಪ್ರಿಯಕರನ ಗೆಳೆಯರಿಂದಲೇ ಗ್ಯಾಂಗ್‌ರೇಪ್
meerut , ಭಾನುವಾರ, 12 ನವೆಂಬರ್ 2023 (08:59 IST)
20 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರ ಸೇರಿದಂತೆ ಮೂರು ಜನ ಯುವಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಘಟನೆ ಮೀರತ್‌ನಲ್ಲಿ ನಡೆದಿದೆ. ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಆರೋಪಿಗಳನ್ನು ಗುರುತಿಸಲಾಗಿದೆ. ಪೀಡಿತೆ ಭವಾನ್ಪುರದ ನಿವಾಸಿಯಾಗಿದ್ದು, ಆರೋಪಿ ಶಾಸ್ತ್ರೀನಗರದ ನಿವಾಸಿಯಾಗಿದ್ದಾನೆ.  
 
ತಾವು ನಡೆಸಿದ ಕುಕೃತ್ಯವನ್ನು ಚಿತ್ರೀಕರಣ ಕೂಡ ಮಾಡಿಕೊಂಡ ಅವರು ಯಾರಿಗಾದರೂ ಈ ಬಗ್ಗೆ ತಿಳಿಸಿದರೆ ಘಟನೆಯ ವಿಡಿಯೋ ಕ್ಲಿಪ್‌ನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. 
 
ಪ್ರಥಮ ಮಾಹಿತಿ ವರದಿಯ ಪ್ರಕಾರ  ತಾನು ವಿವಾಹಿತ ಎಂಬುದನ್ನು ಮುಚ್ಚಿಟ್ಟು  ಪೀಡಿತ ಯುವತಿಯ ಜತೆ ಪ್ರೇಮ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ಆಕೆಯನ್ನಾತ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಕಳೆದ ಅಕ್ಟೋಬರ್ 11 ರಂದು ಆತ ವಿವಾಹಿತನೆಂಬ ಸತ್ಯ ಯುವತಿಯ ಅರಿವಿಗೆ ಬಂದಿದೆ. ಆಗ ಆಕೆ ಆತನ ಜತೆ ಜಗಳವಾಡಿದ್ದಾಳೆ. 
 
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಅಕ್ಟೋಬರ್ 18 ರಂದು ಆತ  ಯುವತಿಯನ್ನು ರೆಸ್ಟೋರೆಂಟ್ ಒಂದಕ್ಕೆ ಕರೆದಿದ್ದಾನೆ. 
 
ಅಲ್ಲಿಗೆ ಬಂದ ಯುವತಿಗೆ ಆರೋಪಿ, ಆತನ ಸಹೋದರ ಆಶು ಮತ್ತು ಸ್ನೇಹಿತ ನಿಕ್ಕಿ ಸಹ ಭೇಟಿಯಾಗಿದ್ದಾರೆ. ಅವರು ಆಕೆಯನ್ನು ಪಲ್ಲವಪುರಮ್ ಪ್ರದೇಶದಲ್ಲಿರುವ ಒಂದು ಮನೆಗೆ ಕರೆದೊಯ್ದಿದ್ದಾರೆ. ಯುವತಿಗೆ ಮತ್ತು ಬರಿಸುವ ಔಷಧಿ ಕುಡಿಸಿ ಆಕೆಯ  ಮೇಲೆ ಅತ್ಯಾಚಾರ ಎಸಗಿ ವಿಡಿಯೋ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಘಟನೆಯಲ್ಲಿ ಪ್ರಜ್ಞೆ ಕಳೆದುಕೊಂಡ ಯುವತಿಗೆ ಎಚ್ಚರವಾದಾಗ  ತಾನು ಮೈದಾನವೊಂದರಲ್ಲಿ ಬಿದ್ದಿರುವುದು ಅರಿವಿಗೆ ಬಂದಿದೆ.  ಅಲ್ಲಿಂದ ಎದ್ದು ಮನೆಗೆ ಹೋದ ಆಕೆಗೆ ದೂರವಾಣಿ ಕರೆ ಮಾಡಿದ ಆರೋಪಿ  ಅವಳ ಮೇಲೆ ತಾವು ಎಸಗಿದ ಪಾಪಾಕೃತ್ಯದ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಬಗ್ಗೆ ಹೇಳಿ, ಈ ಬಗ್ಗೆ ಯಾರಿಗಾದರೂ ಹೇಳಿದರೆ  ಇಂಟರ್ನೆಟ್‍ನಲ್ಲಿ ಅತ್ಯಾಚಾರದ ವಿಡಿಯೋ ಪ್ರಕಟಿಸುವುದಾಗಿ ಬೆದರಿಸಿದ್ದಾನೆ. 
 
ಆರೋಪಿಗಳ ವಿರುದ್ಧ ಭವಾನ್ಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆಗೆ ಯುವಕ ಮಾಡಿದ್ದೇನು ಗೊತ್ತಾ?