Select Your Language

Notifications

webdunia
webdunia
webdunia
webdunia

ರೈಲಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್

ರೈಲಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್
ನವದೆಹಲಿ , ಭಾನುವಾರ, 10 ಅಕ್ಟೋಬರ್ 2021 (14:51 IST)
ಇತ್ತೀಚೆಗೆ ದೇಶದಲ್ಲಿ ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಕಾಮಪಿಶಾಚಿಗಳು ತಮ್ಮ ಕ್ರೌರ್ಯ ಮೆರೆಯುತ್ತಿದ್ದಾರೆ.

ಗಾಂಧೀಜಿ ರಾತ್ರಿ 12 ಗಂಟೆಗೆ ಮಹಿಳೆ ಒಬ್ಬಂಟಿಯಾಗಿ ಹೊರಬಂದ ದಿನ ಸ್ವಾತಂತ್ಯ ಸಿಗುತ್ತೆ ಅಂತ ಹೇಳಿದ್ದಾರೆ. ರಾತ್ರಿ ಇರಲಿ, ಹಗಲಿನಲ್ಲೂ ಕಾಮಪಿಶಾಚಿಗಳು ಸಿಕ್ಕ ಸಿಕ್ಕವರ ಮೇಲೆ ಎರಗಿ ಬೀಳುತ್ತಿದ್ದಾರೆ. ಜನನಿಬಿಡ ಪ್ರದೇಶಗಳಲ್ಲೇ ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಗ್ಯಾಂಗ್ ರೇಪ್ ಎಂಬ ಸುದ್ದಿಯನ್ನ ನಾವು ನೋಡಿದ್ದೆವು. ಆದರೆ ಈಗ ಕಂಡ ಕಂಡಲ್ಲಿ ಕಾಮಾಂಧರು ಕಚ್ಛೆ ಬಿಚ್ಚುತ್ತಾ ತಮ್ಮ ಕಾಮದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ಇದೀಗ ಚಲಿಸುತ್ತಿರುವ ರೈಲಿನಲ್ಲಿ ದರೋಡೆ ಹಾಗೂ 20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪುಷ್ಪಕ್ ಎಕ್ಸ್ಪ್ರೆಸ್ನಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಈ ದುರ್ಘಟನೆ ನಡೆದಿದೆ. ಇಗತ್ಪುರಿ - ಕಾಸ್ರಾ ನಿಲ್ದಾಣದ ನಡುವೆ 8 ದರೋಡೆಕೋರರು ರೈಲಿನ ಪ್ರಯಾಣಿಕರನ್ನ ಲೂಟಿ ಮಾಡಿದ್ದಾರೆ. ಇದೇ ವೇಳೆ ಅಲ್ಲೇ ಇದ್ದ 20 ವರ್ಷದ ಯುವತಿ ಮೇಲೆ ಕಿರಾತಕರು ಎರಗಿಬಿದ್ದಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈವರೆಗೂ 4 ದುಷ್ಕರ್ಮಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಕಾಮಪಿಶಾಚಿಗಳ ಬೇಟೆಗೆ ಬಲೆ ಬೀಸಿದ್ದಾರೆ. ಈ ರೈಲು ಇಗತ್ಪುರಿ ನಿಲ್ದಾಣದಿಂದ ಮುಂಬೈ ಕಡೆ ಹೋಗುವಾಗ, ಸುರಂಗವೊಂದು ಸಿಗುತ್ತೆ. ಈ ವೇಳೆ ರೈಲಿನ ವೇಗ ಕಡಿಮೆಯಾಗುತ್ತೆ. ಇದೇ ಟೈಮ್ನಲ್ಲಿ ದರೋಡೆಕೋರರು ರೈಲು ಹತ್ತಿದ್ದಾರೆ ಅಂತ ಹೇಳಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗತಿಶಕ್ತಿ ಮಾಸ್ಟರ್ ಪ್ಲಾನ್ ಲೋಕಾರ್ಪಣೆ