Select Your Language

Notifications

webdunia
webdunia
webdunia
webdunia

20ರೂಪಾಯಿಗಾಗಿ ತಾಯಿಯನ್ನೇ ಕೊಂದ

Gambling addict
ಮೊರಾದಾಬಾದ್ , ಶನಿವಾರ, 25 ಫೆಬ್ರವರಿ 2017 (12:40 IST)
20 ರೂಪಾಯಿ ನೀಡಲು ನಿರಾಕರಿಸಿದಳೆಂದು ಪಾಪಿಪುತ್ರನೊಬ್ಬ ತನ್ನ ಹೆತ್ತತಾಯಿಯನ್ನೇ ಹತ್ಯೆಗೈದ ಹೇಯ ಘಟನೆ ಮೊರಾದಾಬಾದ್‌ನಲ್ಲಿ ನಡೆದಿದೆ. 

ಆರೋಪಿ ಮಾದಕದ್ರವ್ಯಗಳ ವ್ಯಸನಿಯಾಗಿದ್ದು ಶುಕ್ರವಾರ ತನಗೆ 20 ರೂಪಾಯಿ ನೀಡೆಂದು ತಾಯಿಯನ್ನು ಕೇಳಿದ್ದಾನೆ. ಆದರೆ ನನ್ನ ಬಳಿ ಹಣವಿಲ್ಲ. ಜತೆಗೆ ನಿನ್ನ ಕೆಟ್ಟ ಚಟಕ್ಕೆ ನಾನು ಹಣ ನೀಡುವುದಿಲ್ಲವೆಂದು ತಾಯಿ ಹೇಳಿದ್ದು ಕೋಪಗೊಂಡ ಜಾವೇದ್ ತಾಯಿಯ ಹೊಟ್ಟೆಗೆ ಚಾಕು ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
 
ಈ ಕುರಿತು ಮೃತಳ ಇನ್ನೊಬ್ಬ ಪುತ್ರ ಜಮ್ಶೇದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನೇ ಕೊಂದರೂ ಜಾವೇದ್ ಮುಖದಲ್ಲಿ ಸ್ವಲ್ಪವೂ ಪಶ್ಚಾತಾಪವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 
 
ಹಣಕ್ಕಾಗಿ ಜಾವೇದ್ ಸದಾ ತಾಯಿಯನ್ನು ಪೀಡಿಸುತ್ತಿದ್ದ. ಆತನೊಬ್ಬ ಜೂಜುಕೋರ ಹಾಗೂ ಡ್ರಗ್ಸ್‌ ವ್ಯಸನಿ ಎಂದು ವಿಚಾರಣೆ ವೇಳೆ ಜಮ್ಶೇದ್ ಪೊಲೀಸರಿಗೆ ತಿಳಿಸಿದ್ದಾನೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶೇಮ್ ಶೇಮ್ ದೆಹಲಿ: ಪುಟ್ಟ ಮಗುವಿನ ಮೇಲೆ ಅತ್ಯಾಚಾರಗೈದು ಹತ್ಯೆ