Select Your Language

Notifications

webdunia
webdunia
webdunia
webdunia

ಶೇಮ್ ಶೇಮ್ ದೆಹಲಿ: ಪುಟ್ಟ ಮಗುವಿನ ಮೇಲೆ ಅತ್ಯಾಚಾರಗೈದು ಹತ್ಯೆ

3-year-old girl
ನವದೆಹಲಿ , ಶನಿವಾರ, 25 ಫೆಬ್ರವರಿ 2017 (12:19 IST)
3 ವರ್ಷದ ಬಾಲಕಿಯ ಮೇಲೆ 16 ವರ್ಷದ ಬಾಲಕನೋರ್ವ ಅತ್ಯಾಚಾರಗೈದು ಹತ್ಯೆಗೈದ ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ನಡೆದಿದೆ.
ಆರೋಪಿ ಬಾಲಕಿಯ ನೆರೆಮನೆಯವನಾಗಿದ್ದಾನೆ. ಮಗುವಿನ ಪೋಷಕರು ಕೂಲಿ ಕೆಲಸಕ್ಕೆ ಹೋಗಿದ್ದಾಗ ಆಕೆಯನ್ನು ಎತ್ತಿಕೊಂಡು ಹೋದ ಆರೋಪಿ ಅಜ್ಞಾತ ಸ್ಥಳದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಳಿಕ ಸಿಕ್ಕಿ ಹಾಕಿಕೊಳ್ಳತ್ತೇನೆಂಬ ಭಯದಿಂದ ಆಕೆಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. 
 
ಮನೆಗೆ ಹಿಂತಿರುಗಿದ ಪೋಷಕರ ಮಗುವಿಗಾಗಿ ಹುಡುಕಾಡಿದ್ದಾರೆ. ಆದರೆ ಆಕೆ ಮಾತ್ರ ಪತ್ತೆಯಾಗಲಿಲ್ಲ. 
 
ಆರೋಪಿ ಮಗುವಿನ ಶವವನ್ನು ಹೂಳಲು ಯತ್ನಿಸುತ್ತಿದ್ದಾಗ ಅದನ್ನು ನೋಡಿದ ದಾರಿಹೋಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ  ಪೊಲೀಸರಿಗೆ ಮತ್ತು ಮಗುವಿನ ಪೋಷಕರಿಗೆ ಈ ಕುರಿತ ಮಾಹಿತಿ ನೀಡಿದ್ದಾರೆ. 
 
 ಆರೋಪಿಯ ವಿರುದ್ಧ ಪೋಸ್ಕೋ ಮತ್ತು ಐಪಿಸಿಯ ಇತರ ಕಾಯ್ದೆಯಡಿಯಲ್ಲಿ  ಪ್ರಕರಣ ದಾಖಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

4 ವರ್ಷ ಪೂರೈಸಿದ ಸಚಿವರಿಗೆ ಕೊಕ್..? ನಾಳೆ ನಿರ್ಧಾರ