Select Your Language

Notifications

webdunia
webdunia
webdunia
webdunia

ವಿಪಕ್ಷಗಳ ಬಳಿ ಕಪ್ಪು ಹಣ: ಪ್ರಧಾನಿ ಮೋದಿ ಕ್ಷಮೆಯಾಚನೆಗೆ ವಿಪಕ್ಷಗಳ ಪಟ್ಟು

ವಿಪಕ್ಷಗಳ ಬಳಿ ಕಪ್ಪು ಹಣ: ಪ್ರಧಾನಿ ಮೋದಿ ಕ್ಷಮೆಯಾಚನೆಗೆ ವಿಪಕ್ಷಗಳ ಪಟ್ಟು
ನವದೆಹಲಿ , ಶುಕ್ರವಾರ, 25 ನವೆಂಬರ್ 2016 (12:41 IST)
ಕಪ್ಪು ಹಣ ವರ್ಗಾಯಿಸಲು ಸಮಯ ನೀಡದಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿವೆ ಎಂದು ಪ್ರಧಾನಿ ಮೋದಿ ನೀಡಿದ ಹೇಳಿಕೆಗೆ ವಿಪಕ್ಷಗಳು ಕೆಂಡಾಮಂಡಲವಾಗಿವೆ.
 
ಪ್ರಧಾನಿ ಮೋದಿ ಮನಬಂದಂತೆ ಹೇಳಿಕೆಗಳನ್ನು ನೀಡಿ ವಿಪಕ್ಷಗಳನ್ನು ಅಪಮಾನಿಸುತ್ತಿದ್ದಾರೆ. ಕೂಡಲೇ ಸಂಸತ್ತಿಗೆ ಬಂದು ವಿಪಕ್ಷಗಳ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಸದನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿವೆ. 
 
ಇದಕ್ಕಿಂತ ಮೊದಲು, ಕೇಂದ್ರ ಸರಕಾರದ ನಡೆಯಿಂದ ಕಾಳಧನಿಕರಿಗೆ ಹಣವನ್ನು ವರ್ಗಾಯಿಸಲು ಸಮಯ ದೊರೆಯದಿರುವುದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
 
ನೋಟು ನಿಷೇಧ ಕುರಿತಂತೆ ಪೂರ್ವ ಸಿದ್ದತೆ ಮಾಡಿಕೊಳ್ಳಲು ಸಮಯ ನೀಡಿದ್ದಲ್ಲಿ ಕಪ್ಪು ಹಣ ಹೊಂದಿದವರು ತಮ್ಮ ಹಣವನ್ನು ಬೇರೆ ಕಡೆ ವರ್ಗಾಯಿಸಲು ಸಫಲರಾಗುತ್ತಿದ್ದರು. ಇದೀಗ ಚಿಂತೆಗೊಳಗಾಗಿದ್ದಾರೆ ಎಂದು ತಿರುಗೇಟು ನೀಡಿದರು.
 
500 ಮತ್ತು 1000 ರೂ ನೋಟುಗಳನ್ನು ಬದಲಾಯಿಸಲು ನವೆಂಬರ್ 08 ರಂದು 72 ಗಂಟೆಗಳ ಕಾಲ ಸಮಯಾವಕಾಶ ನೀಡಿದ್ದಲ್ಲಿ ಕಪ್ಪು ಹಣ ಹೊಂದಿದವರು ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು. 
 
ಲೋಕಸಭೆಯಲ್ಲಿ ವಿಪಕ್ಷಗಳು ನೋಟು ನಿಷೇಧ ಕುರಿತಂತೆ ಕೇಂದ್ರ ಸರಕಾರವನ್ನು ಟೀಕಿಸುತ್ತಿವೆ. ನೋಟು ನಿಷೇಧ ಜಾರಿಗೊಳಿಸುವಾಗ ಯಾಕೆ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲ ಎನ್ನುವುದು ವಿಪಕ್ಷಗಳ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
 
ಆದರೆ, ವಿಪಕ್ಷಗಳ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅವರಿಗೆ ಕಪ್ಪು ಹಣವನ್ನು ವರ್ಗಾಯಿಸಲು ಸಮಯ ನೀಡದಿರುವುದೇ ಅವರ ಕೋಪಕ್ಕೆ ಕಾರಣವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ: ನೀವು ಎಲ್ಲೆಲ್ಲಿ 500, 1000 ರೂ ನೋಟು ಬಳಸಬಹುದು ಗೊತ್ತಾ?