Select Your Language

Notifications

webdunia
webdunia
webdunia
webdunia

ನೋಟು ನಿಷೇಧ: ನೀವು ಎಲ್ಲೆಲ್ಲಿ 500, 1000 ರೂ ನೋಟು ಬಳಸಬಹುದು ಗೊತ್ತಾ?

ನೋಟು ನಿಷೇಧ
ನವದೆಹಲಿ , ಶುಕ್ರವಾರ, 25 ನವೆಂಬರ್ 2016 (12:26 IST)
ಕೇಂದ್ರ ಸರಕಾರ 1000 ರೂಪಾಯಿ ನೋಟಿನ ಚಲಾವಣೆ ಸ್ಥಗಿತಗೊಳಿಸಿದೆ. 500 ರೂ ನೋಟು ಮಾತ್ರ ಡಿಸೆಂಬರ್ 15 ರವರೆಗೆ ಬಳಸಬಹುದಾಗಿದೆ
 
ನೀವು ಯಾವ ಯಾವ ಕಡೆ 500 ರೂ ನೋಟು ಬಳಸಬಹುದು ಎನ್ನುವ ಪಟ್ಟಿ ಇಲ್ಲಿದೆ.
 
1 ಸರಕಾರ ಆಸ್ಪತ್ರೆ, ಮತ್ತು ಔಷಧಿ ಅಂಗಡಿಗಳು.
 
2.  ರೈಲ್ವೆ ಟಿಕೆಟ್ ಕೌಂಟರ್, ಸರಕಾರಿ ಬಸ್ ನಿಲ್ದಾಣ, ವಿಮಾನ ಟಿಕೆಟ್ ಖರೀದಿ.
 
3.  ಸಹಕಾರಿ ಕ್ಷೇತ್ರಗಳ ಮಳಿಗೆಗಳಲ್ಲಿ.
 
4 ಕೇಂದ್ರ, ರಾಜ್ಯ ಸರಕಾರದ ಆಧೀನದಲ್ಲಿರುವ ಹಾಲು ಮಾರಾಟ ಕೇಂದ್ರಗಳು.
 
5.  ಪೆಟ್ರೋಲ್, ಡೀಸೆಲ್ ಖರೀದಿಗಾಗಿ.
 
6. ಚಿತಾಗಾರ ಮತ್ತು ಶವಸಂಸ್ಕಾರದ ಸಂದರ್ಭದಲ್ಲಿ.
 
7 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ. 
 
8 ವಿದೇಶಿ ಪ್ರವಾಸಿಗರಿಗೆ ಹಣ ವರ್ಗಾವಣೆಗೆ ಅವಕಾಶ.
 
9. ವೈದ್ಯರ ಶಿಫಾರಸ್ಸು ಪಡೆದ ರಸೀದಿಯಿಂದ ಫಾರ್ಮಸಿಯಲ್ಲಿ ಔಷಧಿ ಖರೀದಿಗಾಗಿ.
 
10. ಗ್ಯಾಸ್ ಸಿಲಿಂಡರ್ ಖರೀದಿಗಾಗಿ.
 
11.  ರೈಲು ಪ್ರವಾಸದ ಸಂದರ್ಭದಲ್ಲಿ ಊಟದ ಸೇವೆಗಾಗಿ.
 
12. ರೈಲು, ಮೆಟ್ರೋ ರೈಲು ಸೇವೆಗಳಲ್ಲಿ.
 
13. ಅರ್ಕಿಯಾಲಾಜಿ ಸರ್ವೇ ಆಫ್ ಇಂಡಿಯಾ ಸಂಚಾಲಿತ ಪ್ರವಾಸಿ ತಾಣಗಳ ವೀಕ್ಷಣೆಗಾಗಿ.
 
14, ಕೇಂದ್ರ, ರಾಜ್ಯ ಸರಕಾರ ಮತ್ತು ನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಶುಲ್ಕ, ತೆರಿಗೆ, ದಂಡ ಪಾವತಿಸಬಹುದು.
 
15. ನೀರು, ವಿದ್ಯುತ್ ಶುಲ್ಕ ಪಾವತಿಗಾಗಿ.
 
16. ಕೋರ್ಟ್ ಶುಲ್ಕ ಪಾವತಿಸಬಹುದು.
 
17. ಕೇಂದ್ರ, ರಾಜ್ಯ ಸರಕಾರ ಆದೀನದಲ್ಲಿರುವ ರೈತ ಕೇಂದ್ರಗಳಿಂದ ಬೀಜ ಖರೀದಿ.
 
18. ಕೇಂದ್ರ, ರಾಜ್ಯ ಸರಕಾರದ ಆಧೀನದಲ್ಲಿರುವ ಶಾಲಾ ಶುಲ್ಕಕ್ಕಾಗಿ 2000 ರೂ.ವರೆಗೆ ಬಳಸಬಹುದು.
 
19. ಕೇಂದ್ರ, ರಾಜ್ಯ ಸರಕಾರ ಸಂಚಾಲಿತ ಕಾಲೇಜುಗಳ ಶುಲ್ಕ ಪಾವತಿ.
 
20. 500 ರೂ. ಮೊಬೈಲ್ ರಿಚಾರ್ಜ್‌ಗಾಗಿ.
 
21 ಗ್ರಾಹಕ ಸಹಕಾರ ಸೇವಾ ಕೇಂದ್ರಗಳಲ್ಲಿ ಬಳಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಯೊಬ್ಬರಿಂದ 2000 ರೂ. ನೋಟುಗಳಿದ್ದ 42 ಲಕ್ಷ ರೂ. ವಶಕ್ಕೆ