Select Your Language

Notifications

webdunia
webdunia
webdunia
webdunia

ಚಪ್ಪಲಿ ವ್ಯಾಪಾರ ಮಾಡುತ್ತಿರುವ ಪಾಕಿಸ್ತಾನದ ಕ್ರಿಕೆಟ್‌ ಅಂಪೈರ್‌ ಅಸಾದ್‌ ರೌಫ್!

ಚಪ್ಪಲಿ ವ್ಯಾಪಾರ ಮಾಡುತ್ತಿರುವ ಪಾಕಿಸ್ತಾನದ ಕ್ರಿಕೆಟ್‌ ಅಂಪೈರ್‌ ಅಸಾದ್‌ ರೌಫ್!
bengaluru , ಶುಕ್ರವಾರ, 24 ಜೂನ್ 2022 (16:21 IST)
ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸಾದ್ ರೌಫ್ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ರೌಫ್ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರ್ ಅಲ್ಲದೇ ಐಪಿಎಲ್‍ನಲ್ಲೂ ಕೂಡ ಅಂಪೈರ್ ಆಗಿ ಕೆಲಸ ನಿರ್ವಹಿಸಿದ್ದರು. ಆದರೆ ಸುಮ್ಮನೆ ಅಂಪೈರಿಂಗ್ ಮಾಡುತ್ತಿದ್ದರೇ ಅಸಾದ್ ರೌಫ್‍ಗೆ ಇದೀಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ರೌಫ್ 2013ರ ಐಪಿಎಲ್‍ನಲ್ಲಿ ಬುಕ್ಕಿಗಳೊಂದಿಗೆ ಸಂಪರ್ಕಿಸಿ ದುಬಾರಿ ಉಡುಗೊರೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಬಳಿಕ ವಿಚಾರಣೆ ನಡೆಸಿದ ಐಸಿಸಿಯ ಶಿಸ್ತು ಸಮಿತಿ ಆರೋಪ ಸಾಬೀತಾದ ಬಳಿಕ ರೌಫ್‍ರನ್ನು 2016ರ ನಂತರ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರಿಂಗ್‍ಗೆ ನಿಷೇಧ ಹೇರಿತ್ತು. ಈ ಮೂಲಕ ಅಸಾದ್ ರೌಫ್ ಅಂಪೈರ್ ವೃತ್ತಿ ಅಂತ್ಯ ಕಂಡಿತು.
ಈ ಮೊದಲು ಮುಂಬೈ ಮೂಲದ ಮಾಡೆಲ್‍ಗೆ ಲೈಂಗಿಕ ಕಿರುಕುಳ ನೀಡಿ ಮದುವೆ ಆಗುವುದಾಗಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೂಡ ರೌಫ್ ಮೇಲೆ ಕೇಳಿಬಂದಿತ್ತು. ರೌಫ್‌ ಈ ಆರೋಪ ಸುಳ್ಳು ಎಂದು ಅಲ್ಲಗಳೆದಿದ್ದರು.
ಅಸಾದ್ ರೌಫ್ 2000 ರಿಂದ 2013 ರವರೆಗೆ 49 ಟೆಸ್ಟ್, 98 ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳು ಸೇರಿ ಒಟ್ಟು 170 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅಂಪೈರ್ ವೃತ್ತಿ ತೊರೆದು ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಅಂಗಡಿಯನ್ನು ತೆರೆದು ಬಟ್ಟೆ, ಚಪ್ಪಲಿ, ಶೂ ವ್ಯಾಪಾರ ಮಾಡುತ್ತಿದ್ದಾರೆ.
ಲಾಹೋರ್‌ನಲ್ಲಿ ಲಾಂಡಾ ಬಜಾರ್ ಕಡಿಮೆ ಬೆಲೆಗೆ ಬಟ್ಟೆ, ಚಪ್ಪಲಿಗಳು ಮತ್ತು ಇತರ ಸರಕುಗಳು ಸಿಗುವ ಸ್ಥಳವಾಗಿದೆ. ಲಾಂಡಾ ಬಜಾರ್‌ನಲ್ಲಿರುವ ಕೆಲವು ಅಂಗಡಿಗಳು ಸೆಕೆಂಡ್ ಹ್ಯಾಂಡ್ ಸರಕುಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ. ಇದೀಗ ಈ ಸ್ಥಲದಲ್ಲಿ ಅಸಾದ್ ರೌಫ್ ಬಟ್ಟೆ, ಚಪ್ಪಳಿ, ಶೂಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

12 ಗಂಟೆ ಕೆಲಸ ಮಾಡಿದರೆ ವಾರದಲ್ಲಿ 3 ವಾರದ ರಜೆ! ಜುಲೈ 1ರಿಂದ ಹೊಸ ನಿಯಮ ಜಾರಿ!