Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ 56 ಇಂಚಿನ ಬ್ರಾ ಕಳುಹಿಸಿಕೊಟ್ಟ ಮಾಜಿ ಯೋಧನ ಪತ್ನಿ..!

ಪ್ರಧಾನಿ ಮೋದಿಗೆ 56 ಇಂಚಿನ ಬ್ರಾ ಕಳುಹಿಸಿಕೊಟ್ಟ ಮಾಜಿ ಯೋಧನ ಪತ್ನಿ..!
ನವದೆಹಲಿ , ಭಾನುವಾರ, 14 ಮೇ 2017 (12:01 IST)
ಭಾರತೀಯ ಯೋಧರ ಮೇಲೆ ಗಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನಿ ಸೇನೆಯ ದಾಳಿಯಿಂದ ರೋಸಿಹೋಗಿರುವ ಮಾಜಿ ಯೋಧನ ಪತ್ನಿ ಪ್ರಧಾನಮಂತ್ರಿ ನರೇಂದ್ರಮೋದಿಗೆ 56 ಇಂಚಿನ ಬ್ರಾ ಕಳುಹಿಸಿಕೊಟ್ಟಿದ್ದಾರೆ.

56 ಇಂಚಿನ ಎದೆ ಧೈರ್ಯದ ಚಿಹ್ನೆಯಾಗಿದ್ದು, ಮೋದಿ ಕೆಲವು ಬಾರಿ 56 ಇಂಚಿನ ಇದೆ ಎಂಬ ಮಾತುಗಳನ್ನಾಡಿದ್ದರು. ಆದರೆ, ಪಾಕಿಗಳ ದಾಳಿಗೆ ಪ್ರತಿಯಾಗಿ ಖಡಕ್ ದಾಳಿ ನಡೆಸಿಲ್ಲ ಎಂಬ ಕೋಪದಲ್ಲಿ ಮಾಜಿ ಯೋಧನ ಪತ್ನಿ 56 ಇಂಚಿನ ಬ್ರಾ ಕಳುಹಿಸಿ ಅಣಕಿಸಿದ್ದಾರೆ.

ಮಾಜಿ ಯೋಧ ಧರಮ್ ವೀರ್ ಸಿಂಗ್ ಪತ್ನಿ ಸುಮನ್ ಸಿಂಗ್ ಬರೆದಿರುವ ಪತ್ರದಲ್ಲಿ ಮೋದಿಗೆ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜನರಿಗೆ ನೀಡಿದ ಭರವಸೆಯನ್ನ ನೆನಪಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಭಾರತದ ಸೇನೆ ಮೇಲೆ ದಾಳಿ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೀರಿ, ಆದರೆ, ನೀವು ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಕಿಡಿ ಕಾರಿದ್ದಾರೆ.

ಫತೇಹಾಬಾದ್`ನ ಜಿಲಾ ಸೈನಿಕ್ ಬೋರ್ಡ್ ಮೂಲಕ ಮೋದಿಗೆ ಪತ್ರ ಮತ್ತು ಬ್ರಾ ಕಳುಹಿಸಿಕೊಡಲಾಗಿದೆ ಎಂದು ಮಾಜಿ ಯೋಧ ತಿಳಿಸಿದ್ದಾನೆ.

ಪಾಕಿಸ್ತಾನದ ಸೈನಿಕರು ಭಾರತದ  ಯೋಧನ ತಲೆಕಡಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯೋಧನ ಪತ್ನಿ, ಪಾಕಿಸ್ತಾನದ ವಿರುದ್ಧ ದಾಳಿ ನಡೆಸಲು ಸೇನೆಗೆ ಸ್ವಾತಂತ್ರ್ಯ ನೀಡುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತೆ–ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ