Select Your Language

Notifications

webdunia
webdunia
webdunia
webdunia

ಅತ್ತೆ–ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

ಅತ್ತೆ–ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
ನವದೆಹಲಿ , ಭಾನುವಾರ, 14 ಮೇ 2017 (10:10 IST)
ಸೋದರತ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸೋದರಳಿಯ ಅಕ್ರಮ ಸಂಬಂಧ ನಿಲ್ಲಿಸಿದ್ದಕ್ಕೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಂದಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
 

ದಕ್ಷಿಣ ದೆಹಲಿಯ ಒಖ್ಲಾ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಈ ದಾರುಣ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಮನೆಗೆ ಬಂದ ಸೋದರಳಿಯ ಗಲಾಟೆ ಮಾಡಿ ಇಬ್ಬರು ಹೆಣ್ಣುಮಕ್ಕಳ ಎದುರೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ತಾನೂ ವಿಷ ಸೇವಿಸಿದ್ದಾನೆ. ಪೊಲೀಸರು ರಸ್ತೆ ಮಧ್ಯೆ ಬಿದ್ದಿದ್ದ ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
 
ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
: ಮೃತ ಮಹಿಳೆ ಒಖ್ಲಾ ಪ್ರದೇಶದಲ್ಲಿ ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳ ಜೊತೆ ವಾಸವಿದ್ದಳು. ಈ ಮಧ್ಯೆ, ಸೋದರಮಾವನ ಮನೆಗೆ ಬಂದ ಸೋದರಳಿಯ ಅಲ್ಲಿಯೇ ಉಳಿದಿದ್ದ. ೀ ಮಧ್ಯೆ, ಅತ್ತೆ ಜೊತೆಯೇ ಸೋದರಳಿಯನಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಇವರಿಬ್ಬರ ರಾಸಲೀಲೆಯ ಸಂಗತಿ ಪತಿಗೆ ತಿಳಿದು ಸೋದರಳಿಯನನ್ನ ಮನೆಯಿಂದ ಹೊರದಬ್ಬಿದ್ದ. 2 ತಿಂಗಳ ಕಾಲ ಸುಮ್ಮನಿದ್ದ ಆತ ಬಳಿಕ ಅದೇ ಕಟ್ಟಡಕ್ಕೆ ಬಂದು ಮನೆ ಬಾಡಿಗೆ ಪಡೆದಿದ್ದ. ನಿನ್ನೆ ಮಧ್ಯಾಹ್ನ, ಮಾವನಿಲ್ಲದ ಸಂದರ್ಭ ಮನೆಗೆ ಬಂದ ಕಾಮುಕ ಪುನಃ ಅಕ್ರಮ ಸಮಬಂಧಕ್ಕೆ ಒತ್ತಾಯಿಸಿದ್ದಾನೆ. ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದಿದ್ದಾನೆ. ಘಟನೆಯನ್ನ ಕಣ್ಣಾರೆ ಕಂಡ ಇಬ್ಬರು ಹೆಣ್ಣುಮಕ್ಕಳು ಶಾಕ್`ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

"ಬರ" ದಲ್ಲೂ ಭಿನ್ನಮತ: ಬಿಎಸ್‌ವೈ-ಈಶ್ವರಪ್ಪ ಪ್ರತ್ಯೇಕ ರಾಜ್ಯ ಪ್ರವಾಸ