ದೊಡ್ಡ ಮುಖಬೆಲೆ ನೋಟು ನಿಷೇಧ ವಿರೋಧಿಸಿ ಸಂಸತ್ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಗರಂ ಆಗಿದ್ದು ರಾಷ್ಟ್ರಪತಿ ದಯವಿಟ್ಟು ನಿಮ್ಮ ಕೆಲಸವನ್ನು ನೀವು ಮಾಡಿ. ಸಂಸತ್ತು ಇರುವುದು ಚರ್ಚೆ ನಡೆಸಲು, ಧರಣಿ-ಕೋಲಾಹಲ ನಡೆಸಲು ಅಲ್ಲ ಎಂದು ಸಂಸದರನ್ನುದ್ದೇಶಿಸಿ ಹೇಳಿದ್ದಾರೆ.
ನವದೆಹಲಿ: ಗದ್ದಲದ ಮೂಲಕ ಸಂಸತ್ ಕಲಾಪಕ್ಕೆ ಅಡ್ಡಿ ಮಾಡುತ್ತಿರುವ ಸಂಸದರಿಗೆ ಚುರುಕು ಮುಟ್ಟಿಸಿರುವ ರಾಷ್ಟ್ರಪತಿ ಪ್ರಣವ್
ಮುಖರ್ಜಿ, ಸಂಸತ್ತು ಇರುವುದು ಧರಣಿ ಮತ್ತು ಗದ್ದಲ ನಡೆಸುವುದಕ್ಕೆ ಅಲ್ಲ ಎಂದು ಹೇಳಿದ್ದಾರೆ.
ಸಂಸತ್ತಿನ ಕಲಾಪಕ್ಕೆ ಪ್ರತಿದಿನ ಅಡ್ಡಿ ಪಡಿಸುತ್ತಿರುವುದು ಸ್ವೀಕಾರಾರ್ಹವಲ್ಲ. ಬಹುಮತ ಪಡೆದು ಅಧಿಕಾರ ನಡೆಸುತ್ತಿರುವ ಸರ್ಕಾರದ ಮೇಲೆ ಪದೇ ಪದೇ ಒತ್ತಡ ಹೇರಕೂಡದು. ಸಂಸತ್ತು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ಸಂಸದರೇ, ನೀವು ನಿಮ್ಮ ಕರ್ತವ್ಯ ನಿರ್ವಹಿಸಿ. ಸಂಸತ್ತಿನಲ್ಲಿ ಚರ್ಚಿಸಿ ದೇಶದ ಸಮಸ್ಯೆ ಬಗೆಹರಿಸಲಿ ಎಂದು ನಿಮ್ಮನ್ನು ಜನಪ್ರತಿನಿಧಿಗಳಾಗಿ ಕಳುಹಿಸಿದ್ದಾರೆಯೇ ಹೊರತು ಕಲಾಪಕ್ಕೆ ಅಡ್ಡಿ ಪಡಿಸುವುದಕ್ಕಲ್ಲ ಎಂದು ಖೇದ ವ್ಯಕ್ತ ಪಡಿಸಿದ್ದಾರೆ.
ಹೀಗೆ ಪದೇ ಪದೇ ಕೋಲಾಹಲ ಎಬ್ಬಿಸುವುದು ಎಂದರೆ ಬಹುಮತ ಇರುವವರನ್ನು ಎಂದರ್ಥ ಎಂದು ಕಿಡಿಕಾರಿದ ಅವರು ದಯವಿಟ್ಟು ದೇವರನ್ನು ಮೆಚ್ಚಿಸುವ ಕೆಲಸ ಮಾಡಿ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.