Daily Horoscope

Select Your Language

Notifications

webdunia
webdunia
webdunia
webdunia

ಮಗುವನ್ನು ನೆಲಕ್ಕೆ ಬಡಿದು ಕೊಂದ ಪಾಪಿಗೆ ಗಲ್ಲು ಶಿಕ್ಷೆ: ಎಲ್ಲಾ ಪ್ರಕರಣವೂ ಇಷ್ಟು ಬೇಗ ಇತ್ಯರ್ಥವಾಗಬೇಕು ಎಂದ ಪಬ್ಲಿಕ್

Firozbad accused Viraj
Photo Credit: X
ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯವು ಈ ಭೀಕರ ಅಪರಾಧಕ್ಕೆ ಕೇವಲ 41 ದಿನಗಳಲ್ಲಿ ಮರಣದಂಡನೆ (ಗಲ್ಲಿಗೇರಿಸುವ) ಶಿಕ್ಷೆ ವಿಧಿಸಿರುವುದು ಶೀಘ್ರ ನ್ಯಾಯದಾನಕ್ಕೆ ಸೂಕ್ತ ನಿದರ್ಶನವಾಗಿದೆ.

ಅಮಾಯಕ ಮಗುವಿನ ಮೇಲಿನ ಈ ಕ್ರೂರ ಕೃತ್ಯಕ್ಕೆ ಹಾಗೂ ಸಂತ್ರಸ್ತೆ ತಾಯಿಯ ಮೇಲಿನ ದೌರ್ಜನ್ಯಕ್ಕೆ ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ನೀಡಬಹುದಾದ ಗರಿಷ್ಠ ಮತ್ತು ಕಠಿಣ ಶಿಕ್ಷೆಯನ್ನೇ ವಿಧಿಸಿದೆ. ದಂಡಸಂಹಿತೆ ಮತ್ತು ಸಮಾಜದ ಭದ್ರತೆಯ ಹಿತದೃಷ್ಟಿಯಿಂದ ಇಂತಹ ಅಪರಾಧಿಗಳಿಗೆ ವಿಳಂಬವಿಲ್ಲದೆ ತೀವ್ರ ಶಿಕ್ಷೆಯಾಗುವುದು ಸಮಾಜದಲ್ಲಿ ಅಪರಾಧಗಳನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ಕಾನೂನಿನ ಮೇಲೆ ನಂಬಿಕೆ ಹೆಚ್ಚಿಸಲು ಅತ್ಯಗತ್ಯ.

ಘಟನೆ ನಡೆದಿದ್ದು ಹೇಗೆ?
ತ್ವರಿತ ನ್ಯಾಯದಾನ: ಘಟನೆ ನಡೆದ ಕೇವಲ 41 ದಿನಗಳ ಒಳಗೆ ಸಾಕ್ಷ್ಯಧಾರಗಳ ವಿಚಾರಣೆ ನಡೆಸಿ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದೆ. ಮಗುವಿನ ತಾಯಿ ಜೊತೆ ಮದುವೆಯಾಗಲು ಬಯಸಿದ್ದ ವಿರಾಜ್ ಗೆ ಈ ಮಗು ಅಡ್ಡಿಯಾಗಿತ್ತು. ಅದೇ ಕಾರಣಕ್ಕೆ ಮಗುವನ್ನು ಚಾಕಲೇಟ್ ಕೊಡಿಸುವುದಾಗಿ ಅಮಿಷವೊಡ್ಡಿ ಕರೆದೊಯ್ದು ನೆಲಕ್ಕೆ 8 ಬಾರಿ ಬಡಿದು ಅಮಾನುಷವಾಗಿ ಕೊಲೆ ಮಾಡಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ನ್ಯಾಯಾಲಯದ ಆದೇಶ: ಅಪರಾಧಿ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಇಂತಹ ದೃಶ್ಯಗಳು ಮತ್ತು ಅಪರಾಧಗಳು ಸಮಾಜಕ್ಕೆ ಅತ್ಯಂತ ಕಂಟಕಪ್ರದ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿ ನೀಡಲಾದ ಈ ಮರಣದಂಡನೆ ತೀರ್ಪು ಸಮಾಜದಲ್ಲಿ ಅಪರಾಧಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯ ಸಂದೇಶ ರವಾನಿಸಿದೆ. ಎಲ್ಲಾ ಪ್ರಕರಣಗಳೂ ಇದೇ ರೀತಿ ಬೇಗ ಇತ್ಯರ್ಥವಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸೂರು, ಆರು ತಲೆಮಾರುಗಳು, 83 ಸದಸ್ಯರು, ನಾಗಪ್ಪರ ಅವಿಭಕ್ತ ಕುಟುಂಬದ ಒಂದು ಲುಕ್, Video