Select Your Language

Notifications

webdunia
webdunia
webdunia
webdunia

ಉದ್ಯಮಿ ಮುಖೇಶ್ ಅಂಬಾನಿ ನಿವಾಸದಲ್ಲಿ ಅಗ್ನಿ ಅವಘಡ

ಮುಖೇಶ್ ಅಂಬಾನಿ
ಉದ್ಯಮಿ ಮುಖೇಶ್ ಅಂಬಾನಿ ನಿರ್ಮಿಸಿರುವ ಮುಂಬೈನ ಬಿಲಿಯನ್ ಡಾಲರ್ ನಿವಾರ್ ಆಂಟಿಲಿಯಾದಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ರಾತ್ರಿ 9 ಗಂಟೆ ಸುಮಾರಿಗೆ 9ನೇ ಮಹಡಿಯಲ್ಲಿ ಅಗ್ನಿ ಜ್ಬಾಲೆ ಹಬ್ಬಿದ್ದು, ಮುಂಬೈ ಪಾಲಿಕೆಯ 6 ಅಗ್ನಿಶಾಮಕ ವಾಹನಗಳು, ವಾಟರ್ ಜೆಟ್ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ. 9ನೇ ಮಹಡಿಯ 4ಜಿ ಟವರ್`ನಲ್ಲಿ ಅಗ್ನಿ ಬೆಂಕಿ ಹೊತ್ತುಕೊಂಡು ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಧಿಕ ನಷ್ಟವೂ ಸಂಭವಿಸಿಲ್ಲ ಎನ್ನಲಾಗಿದೆ.

27 ಮಹಡಿಯ 4 ಲಕ್ಷ ಚದರಡಿಯ ಈ ನಿವಾಸ ವಿಶ್ವದಲ್ಲೇ ಅತ್ಯಂತ ದುಬಾರಿ ಕಟ್ಟಡವಾಗಿದೆ. ಲಂಡನ್ನಿನಲ್ಲಿರುವ ಲಕ್ಷ್ಮೀ ಮಿತ್ತಲ್ ನಿವಾಸವನ್ನೂ ಮೀರಿಸಿದ ಕಟ್ಟಡವೆಂದು ಫೋರ್ಬ್ಸ್ ವರದಿ ಮಾಡಿತ್ತು. ಈ ಕಟ್ದಟದ ನಿರ್ಮಾಣ ವೆಚ್ಚ 1 ರಿಂದ 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರು ಅಪಘಾತ