Publish Date: Tue, 11 Jul 2017 (11:38 IST)
Updated Date: Tue, 11 Jul 2017 (11:40 IST)
ನವದೆಹಲಿ: ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ಅಪಘಾತಕ್ಕೀಡಾಗಿರುವುದಾಗಿ ವರದಿಯಾಗಿದೆ.
ಬೆಳಗ್ಗೆ ಸಂಸತ್ ಭವನಕ್ಕೆ ತೆರಳುವಾಗ ದೆಹಲಿಯ ಅಕ್ಬರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಮಾಜಿ ಪ್ರಧಾನಿ ಹಾಗೂ ಅವರ ಜತೆಗಿದ್ದವರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.
ಮನಮೋಹನ್ ಸಿಂಗ್ ಚಲಿಸುತ್ತಿದ್ದ ಕಾರಿನ ಮುಂದೆ ಸಾಗುತ್ತಿದ್ದ ಬೆಂಗಾವಲು ಪಡೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಯಾವುದೇ ಅಪಾಯವಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ