Select Your Language

Notifications

webdunia
webdunia
webdunia
webdunia

ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ: ಹಲವು ಮಂದಿಗೆ ಗಾಯ

Tata Electronics Unit

Sampriya

ಚೆನ್ನೈ , ಶನಿವಾರ, 28 ಸೆಪ್ಟಂಬರ್ 2024 (16:52 IST)
Photo Courtesy X
ಚೆನ್ನೈ: ಟಾಟಾ ಕಂಪನಿಯ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ಘಟಕದ ರಾಸಾಯನಿಕ ಗೋದಾಮಿನಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ, ಒಂಭತ್ತು ಜನ ಗಾಯಗೊಂಡಿರುವ ಘಟನೆ ತಮಿಳುನಡಿದ ಹೊಸೂರಿನಲ್ಲಿ ನಡೆದಿದೆ.

ಘಟಕದ ರಾಸಾಯನಿಕ ಗೋದಾಮಿನಲ್ಲಿ ಶನಿವಾರ ಬೆಳಗ್ಗೆ 6ಗಂಟೆಗೆ ಬೆಂಕಿ ಕಾಣಿಸಿಕೊಂಡಿಸಿದೆ. ಇದರಿಂದ ಹೊಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಹಲವು ಗಂಟೆಗಳ ಶ್ರಮದ ಬಳಿಕ ಯಶಸ್ವಿಯಾಗಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಈ ಬಗ್ಗೆ ಟಾಟಾ ಎಲೆಕ್ಟ್ರಾನಿಕ್ಸ್‌ನ ಅಧಿಕಾರಿಗಳು, ಇದೊಂದು ದುರದೃಷ್ಟಕರ ಘಟನೆ ಶನಿವಾರ ನಡೆದಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನೆಗೆ ಕಾರಣವನ್ನು ಪತ್ತೆ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ತಲ್ಲಿನರಾಗಿದ್ದಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಸೇವೆ ಮಾಡಬೇಕೆಂದು ನನ್ನ ಆಸೆ: ಅಂತೂ ಪರೋಕ್ಷವಾಗಿ ಸಿಎಂ ಕುರ್ಚಿಗೆ ಟವಲ್ ಹಾಕಿದ ಡಿಕೆ ಶಿವಕುಮಾರ್