Select Your Language

Notifications

webdunia
webdunia
webdunia
webdunia

ಸಿಬಿಐನ ಮಾಜಿ ನಿರ್ದೇಶಕನ ವಿರುದ್ಧವೇ ಸಿಬಿಐನಿಂದ ಎಫ್ಐಆರ್ ದಾಖಲು

ಸಿಬಿಐನ ಮಾಜಿ ನಿರ್ದೇಶಕನ ವಿರುದ್ಧವೇ ಸಿಬಿಐನಿಂದ ಎಫ್ಐಆರ್ ದಾಖಲು
ನವದೆಹಲಿ , ಮಂಗಳವಾರ, 25 ಏಪ್ರಿಲ್ 2017 (20:30 IST)
ಬಹುಕೋಟಿ ರೂಪಾಯಿ ಕಲ್ಲಿದ್ದಲು ಹಗರಣದ ತನಿಖೆ ಮೇಲೆ ಪ್ರಭಾವ ಬೀರಲು ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡ ಆರೋಪದಡಿ ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ವಿರುದ್ಧವೇ ಸಿಬಿಐ ವಿರುದ್ಧ ಎಫ್`ಐಆರ್ ದಾಖಲಿಸಿದೆ.

ಪ್ರಕರಣದ ಆರೋಪಿಗಳ ಭೇಟಿ, ತನಿಖೆ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಕುರಿತಂತೆ ಮೇಲ್ನೋಟಕ್ಕೆ ಕಂಡು ಬಂದ ಸಾಕ್ಷ್ಯಗಳ ಆಧಾರದ ಮೇಲೆ ವಿಶೇಷ ತನಿಖಾ ತಂಡ ರಚಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಇದೀಗ, ಸಿಬಿಐನ ವಿಶೇಷ ತನಿಖಾ ತಂಡ ಸಿನ್ಹಾ ವಿರುದ್ಧ ಎಫೈಆರ್ ದಾಖಲಿಸಿದೆ.

ಸಿಬಿಐನಲ್ಲೇ ಕೆಲಸ ಮಾಡಿ ಅಲ್ಲಿಯೇ ಎಫೈಆರ್ ದಾಖಲಾದ 2ನೇ ಮಾಜಿ ನಿರ್ದೇಶಕರ ಸಾಲಿನಲ್ಲಿ ರಂಜೀತ್ ಸಿನ್ಹಾ 2ನೇಯವರಾಗಿದ್ದು, ಈ ಹಿಂದೆ ಎ.ಪಿ. ಸಿಂಗ್ ವಿರುದ್ಧ ಮಾಂಸ ರಫ್ತುದಾರ ಮೋಯಿನ್ ಖುರೇಷಿ ಜೊತೆಗೇ ಎಫ್`ಐಆರ್ ದಾಖಲಾಗಿತ್ತು.

ರಂಜೀತ್ ಸಿನ್ಹಾ ವಿರುದ್ಧ ಸೆಕ್ಷನ್ 13(2)(ಕ್ರಿಮಿನ್ಲ್ ಸ್ಥಾನದ ದುರುಪಯೋಗ), 13 (1) (d)(ಅಧಿಕೃತ ಸ್ಥಾನದ ದುರುಪಯೋಗ), ಸಾರ್ವಜನಿಕ ಕಚೇರಿ ದುರುಪಯೋಗ, ಭ್ರಷ್ಟಾಚಾರಕ್ಕೆ ಉತ್ತೇಜನ ಆರೋಪದಡಿ ಎಫೈಆರ್ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ರಂಜೀತ್ ಸಿನ್ಹಾಗೆ 7 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್, ರೆಸ್ಟೋರೆಂಟ್`ಗಳಲ್ಲಿ ಸೇವಾ ಶುಲ್ಕ ರದ್ದು ಜಾರಿ: ಯು.ಟಿ. ಖಾದರ್