Select Your Language

Notifications

webdunia
webdunia
webdunia
webdunia

ಕ್ವಿಟ್ ಇಂಡಿಯ ಚಳುವಳಿಯನ್ನು ಕೆಲ ಗುಂಪುಗಳು ವಿರೋಧಿಸಿದ್ದವು: ಆರೆಸ್ಸೆಸ್ ವಿರುದ್ಧ ಸೋನಿಯಾ ವಾಗ್ದಾಳಿ

ಕ್ವಿಟ್ ಇಂಡಿಯ ಚಳುವಳಿಯನ್ನು ಕೆಲ ಗುಂಪುಗಳು ವಿರೋಧಿಸಿದ್ದವು: ಆರೆಸ್ಸೆಸ್ ವಿರುದ್ಧ ಸೋನಿಯಾ ವಾಗ್ದಾಳಿ
ನವದೆಹಲಿ , ಬುಧವಾರ, 9 ಆಗಸ್ಟ್ 2017 (13:47 IST)
ಕಳೆದ 1942 ರಲ್ಲಿ ದೇಶದ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ್ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದಾಗ ಕೆಲ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪರೋಕ್ಷವಾಗಿ ಬಿಜೆಪಿ, ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ಕ್ವಿಟ್ ಇಂಡಿಯಾ ಚಳವಳಿಯ ಪರಿಕಲ್ಪನೆಯನ್ನು ಕೆಲ ಸಂಘಟನೆಗಳು ವಿರೋಧಿಸಿರುವುದನ್ನು ನಾವು ಮರೆಯಬಾರದು, ಈ ಸತ್ಯಗಳನ್ನು ಸಹ ಹೇಳಬೇಕು" ಎಂದು ತಿರುಗೇಟು ನೀಡಿದರು.
 
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಆ ಗುಂಪುಗಳ ಯಾವುದೇ ಕೊಡುಗೆ ಇಲ್ಲ ಎಂದ ಅವರು, 1925 ರಲ್ಲಿ ರಚನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅನ್ನು ಹೆಸರಿಸದೆ ಹೇಳಿದರು.
 
ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವಿಲ್ಲ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯದ ಹೋರಾಟದ ನೇತೃತ್ವ ವಹಿಸಿತ್ತು ಎಂದು ಭಾರತೀಯ ಇತಿಹಾಸ ತಜ್ಞರು, ಹಲವು ಭಾರತೀಯ ಇತಿಹಾಸಕಾರರು ಬರೆದಿದ್ದಾರೆ. ಆದರೆ, ಅದನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ದವಿಲ್ಲ ಎಂದು ಲೇವಡಿ ಮಾಡಿದರು.
 
ದೇಶದಲ್ಲಿ ಕರಾಳ, ವಿಚ್ಚಿದ್ರಕಾರಿ ಶಕ್ತಿಗಳು ಮತ್ತೆ ತಲೆ ಎತ್ತುತ್ತಿವೆ. ನಮ್ಮ ದೇಶದ ಜಾತ್ಯಾತೀತವಾದ, ಉದಾರ ಮತ್ತು ಮುಕ್ತ ಚಿಂತನೆಗೆ ಬೆದರಿಕೆ ಇದೆ. ಇಂತಹ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
 
ದ್ವೇಷ ಮತ್ತು ಪ್ರತೀಕಾರದ ರಾಜಕೀಯವು ದೇಶದಲ್ಲಿ ತಾಂಡವವಾಡುತ್ತಿದೆ. ಸಾರ್ವಜನಿಕ ಚರ್ಚೆಗಳಿಗೆ ಯಾವುದೇ ಅವಕಾಶವಿಲ್ಲದಂತಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಜಲಾಶಯದಿಂದ ನಾಳೆ ನಾಲೆಗಳಿಗೆ ನೀರು: ಸಿಎಂ ಘೋಷಣೆ