Select Your Language

Notifications

webdunia
webdunia
webdunia
webdunia

ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯಭೇರಿ: ಅಮಿತ್ ಶಾಗೆ ಮುಖಭಂಗ

ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಜಯಭೇರಿ: ಅಮಿತ್ ಶಾಗೆ ಮುಖಭಂಗ
ಗಾಂಧಿನಗರ , ಬುಧವಾರ, 9 ಆಗಸ್ಟ್ 2017 (07:56 IST)
ನಿನ್ನೆ ದಿನಪೂರ್ತಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ಮೇಲಾಟಗಳ ಬಳಿಕ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಗೆಲುವು ಸಾಧಿಸಿದ್ದಾರೆ. 44 ಮತಗಳನ್ನ ಪಡೆದ ಅಹ್ಮದ್ ಪಟೇಲ್ ಪ್ರತಿಸ್ಪರ್ಧಿ ಬಿಜೆಪಿಯ ಬಲವಂತಸಿಂಗ್ ರಜಪೂತ್ ಅವರನ್ನ ಮಣಿಸಿದ್ದಾರೆ.  ನಿರೀಕ್ಷೆಯಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಯ ಗಳಿಸಿದ್ದಾರೆ.

ಆದರೆ, ಶತಾಯಗತಾಯ ಅಹ್ಮದ್ ಪಟೇಲ್ ಅವರನ್ನ ಮಣಿಸಬೇಕೆಂದು ಪಣತೊಟ್ಟಿದ್ದ ಬಿಜೆಪಿ ರಾಷ್ಟ್ರೀಯ  ಅಧ್ಯಕ್ಷ ಅಮಿತ್ ಶಾಗೆ ತೀವ್ರ ಮುಖಭಂಗವಾಗಿದೆ.  ಇಬ್ಬರು ಶಾಸಕರು ಬಿಜೆಪಿ ಬೂತ್ ಏಜೆಂಟ್`ಗೆ ತೋರಿಸಿ ಮತದಾನ ಮಾಡಿದ್ದರಿಂದ ಎರಡು ಮತಗಳನ್ನ ಅಮಾನತು ಮಾಡಲಾಯ್ತು. ಹೀಗಾಗಿ, 44 ಮತೆಗಳನ್ನ ಪಡೆದ ಅಹ್ಮದ್ ಪಟೇಲ್ ಗೆಲುವಿನ ಪತಾಕೆ ಹಾರಿಸಿದರು. ಬಿಜೆಪಿಯ ಬಲವಂತ ಸಿಂಗ್ ಕೇವಲ 38 ಮತಗಳನ್ನ ಪಡೆದರು.
ಗೆಲುವಿನ ಬಳಿಕ ಟ್ವಿಟ್ ಮಾಡಿರುವ ಅಹ್ಮದ್ ಪಟೇಲ್ ಸತ್ಯಮೇವಜಯtE. ಹಣ ಮತ್ತು ತೋಳುಬಲ ಬಳಸಿಕೊಂಡು ದೇಶದ ಆಡಳಿತ ಯಂತ್ರವನ್ನ ದುರ್ಬಳಕೆ ಮಾಡಿಕೊಂಡವರ ಸೋಲು ಎಂದು ಹೇಳಿದ್ದಾರೆ.

ರಾಜಸಭಾ ಚುನಾವಣೆ ಮಧ್ಯಾಹ್ನವೇ ಮುಗಿದರೂ ಇಬ್ಬರು ಕಾಂಗ್ರೆಸ್`ನ ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ತಮಧ್ಯರಾತ್ರಿವರೆಗೆ ರಾಜಕೀಯ ಪ್ರಹಸನ ಮುಂದುವರೆದಿತ್ತು. ಬಿಜೆಪಿ ಬೂತ್ ಏಜೆಂಟರ್`ಗೆ ತೋರಿಸಿ ಇಬ್ಬರು ಶಾಸಕರು ಮತದಾನ ಮಾಡಿದ್ದಾರೆ. ವಿಡಿಯೋ ಪರಿಶೀಲಿಸಿ ಅವರ ಮತಗಳನ್ನ ಅಮಾನತು ಮಾಡಬೇಕೆಂದು ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಮತ ಎಣಿಕೆ ಮುಂದೂಡಲಾಗಿ, ಹಗ್ಗಜಗ್ಗಾಟದ ಬಳಿಕ ಮಧ್ಯರಾತ್ರಿ ಚುನಾವಣಾ ಆಯೋಗ ಎರಡು ಮತಗಳನ್ನ ಅಮಾನತು ಮಾಡಿತು. ಬಳಿಕ ನಡೆದ ಮತ ಎಣಿಕೆ ವೇಳೆ ಅಹ್ಮದ್ ಪಟೇಲ್ ಜಯಭೇರಿ ಬಾರಿಸಿದರು. ಈ ಫಲಿತಾಂಶದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮಿರ ಗಡಿಯೊಳಗೆ ನುಗ್ಗುತ್ತೇವೆ ಏನ್‌ ಮಾಡ್ತೀರಾ?: ಪ್ರಧಾನಿ ಮೋದಿಗೆ ಚೀನಾ ನೇರ ಎಚ್ಚರಿಕೆ