Publish Date: Mon, 29 Jun 2020 (17:31 IST)
Updated Date: Mon, 29 Jun 2020 (17:32 IST)
ಮಗನಿಗಾಗಿ ತಂದೆಯೊಬ್ಬ ಬರೋಬ್ಬರಿ 28 ಹೊಸ ಕಾರ್ ಗಳನ್ನು ಬುಕ್ ಮಾಡಿರುವ ಘಟನೆ ನಡೆದಿದೆ.
ಜರ್ಮನಿಯಲ್ಲಿ ಘಟನೆ ನಡೆದಿದ್ದು, ಆನ್ ಲೈನ್ ನಲ್ಲಿ ತನ್ನ ಮಗನಿಗಾಗಿ ತಂದೆಯೊಬ್ಬ ಕಾರ್ ಬುಕ್ ಮಾಡಿದ್ದಾನೆ.
ಆದರೆ ಆತ ಬುಕ್ ಮಾಡಿದ್ದು ಬರೋಬ್ಬರಿ 28 ಕಾರ್ ಗಳಾಗಿದ್ದು, 11.9 ಕೋಟಿ ರೂ. ಪಾವತಿ ಮಾಡಬೇಕಿತ್ತು.
ಆದರೆ ಆನ್ ಲೈನ್ ಬುಕಿಂಗ್ ವೇಳೆ ಕನ್ಫರ್ಮ್ ಮೇಸೆಜ್ ಸಿಗದ ಕಾರಣ ಪದೇ ಪದೇ ಕ್ಲಿಕ್ ಮಾಡಿ 28 ಕಾರ್ ಗಳನ್ನು ಬುಕ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ತನ್ನ ಮಗನಿಗಾಗಿ ಒಂದು ಕಾರ್ ಬುಕ್ ಮಾಡಲು ಮುಂದಾಗಿದ್ದ ತಂದೆ, ಬರೋಬ್ಬರಿ 28 ಕಾರ್ ಗಳನ್ನು ಬುಕ್ ಮಾಡಿದ್ದನು. ಆ ಬಳಿಕ ಕಂಪನಿಯವರು ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ.