ಓದಿಕೋ ಎಂದು ಗದರಿದ ತಂದೆ : 9ರ ಬಾಲಕಿ ನೇಣಿಗೆ ಶರಣು

Webdunia
ಶುಕ್ರವಾರ, 31 ಮಾರ್ಚ್ 2023 (10:32 IST)
ಚೆನ್ನೈ : ಆಡಿದ್ದು ಸಾಕು, ಹೊಗಿ ಓದಿಕೋ ಎಂದು ತಂದೆ ಗದರಿದ್ದಕ್ಕೆ 9 ವರ್ಷದ ಬಾಲಕಿ ನೊಂದು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ತಮಿಳುನಾಡಿದ ತಿರುವಳ್ಳೂರಿನಲ್ಲಿ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸೋಮವಾರ ಬಾಲಕಿ ತನ್ನ ಸಂಬಂಧಿಕರ ಮನೆಯ ಬಳಿ ಆಟವಾಡುತ್ತಿದ್ದುದನ್ನು ನೋಡಿದ ತಂದೆ ಕೃಷ್ಣಮೂರ್ತಿ, ಆಡಿದ್ದು ಸಾಕು, ಹೋಗಿ ಓದಿಕೋ ಎಂದು ಮಗಳಿಗೆ ಗದರಿದ್ದಾರೆ. ಬಳಿಕ ಮನೆಯ ಬೀಗವನ್ನು ಮಗಳ ಕೈಯಲ್ಲಿ ನೀಡಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಬೈಕ್ಗೆ ಇಂಧನ ತುಂಬಲು ತೆರಳಿದ್ದ ಕೃಷ್ಣಮೂರ್ತಿ ರಾತ್ರಿ 8:15ರ ವೇಳೆಗೆ ಮನೆಗೆ ವಾಪಸಾಗಿದ್ದಾರೆ. ಆದರೆ ಮನೆ ಒಳಗಿಂದ ಬೀಗ ಹಾಕಲಾಗಿದ್ದು, ಮಗಳನ್ನು ಎಷ್ಟೇ ಕರೆದರೂ ಆಕೆ ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಗಾಬರಿಗೊಂಡ ಕೃಷ್ಣಮೂರ್ತಿ ಮನೆಯ ಕಿಟಕಿಯನ್ನು ಒಡೆದು ಒಳಗೆ ಹೋಗಿದ್ದಾರೆ. 

ಈ ವೇಳೆ ಬಾಲಕಿ ನೇಣಿಗೆ ಕೊರಳೊಡ್ಡಿರುವ ಆಘಾತಕಾರಿ ದೃಶ್ಯ ತಂದೆಯ ಕಣ್ಣಿಗೆ ಬಿದ್ದಿದೆ. ಬಾಲಕಿ ಹತ್ತಿಯ ಟವೆಲ್ನಲ್ಲಿ ನೇತಾಡುತ್ತಿದ್ದು, ಉಸಿರಾಡಲು ಕಷ್ಟಪಡುತ್ತಿದ್ದಳು ಎನ್ನಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಅಲ್ಲಿ ಮೃತಪಟ್ಟಿದ್ದಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಭೀಷ್ಮ ಎಲ್‌.ಕೆ. ಅಡ್ವಾಣಿಗೆ 98ನೇ ಜನ್ಮದಿನದ ಸಂಭ್ರಮ: ಮೋದಿ ಸೇರಿ ಗಣ್ಯರ ಶುಭಾಶಯ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್: ಮಾಧ್ಯಮಗಳ ಪ್ರಶ್ನೆಗೆ ಸಿಎಂ ಏನು ಹೇಳಿದ್ರು

ಕೆಲವರು ಮುಳುಗುವುದಕ್ಕೆ ಪ್ರಾಕ್ಟೀಸ್ ಮಾಡ್ತಿದ್ದಾರೆ: ರಾಹುಲ್ ಗಾಂಧಿಗೆ ಮೋದಿ ಟಾಂಗ್

ರಾಷ್ಟ್ರಪತಿ ಜೊತೆ ವಿ ಸೋಮಣ್ಣ ಸೌತ್ ಆಫ್ರಿಕಾ ಪ್ರವಾಸ: ಮೋದಿಗೆ ಥ್ಯಾಂಕ್ಸ್ ಹೇಳಿದ ಸಚಿವ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments