Publish Date: Mon, 04 Dec 2017 (09:04 IST)
Updated Date: Mon, 04 Dec 2017 (09:06 IST)
ನವದೆಹಲಿ: ತಂದೆಯಿಂದಲೇ ಮಗಳ ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇಂತಹದ್ದೇ ಮತ್ತೊಂದು ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಪೂರ್ವ ದೆಹಲಿಯ ಜಾಪಟ್ ಪುರಿ ಎಂಬಲ್ಲಿ 14 ವರ್ಷದ ಪುತ್ರಿಯ ಮೇಲೆ ತಂದೆಯೇ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ. ಕೆಲವು ದಿನಗಳ ಮೊದಲೇ ಘಟನೆ ನಡೆದಿದ್ದರೂ ಈಗಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಯಾರಿಗೂ ಹೇಳದಂತೆ ತಂದೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆದರೆ ಕೊನೆಗೆ ಸಂತ್ರಸ್ತೆ ತನ್ನ ತಾಯಿ ಬಳಿ ತಂದೆಯ ಹೀನ ಕೃತ್ಯದ ಬಗ್ಗೆ ಹೇಳಿಕೊಂಡಿದ್ದು, ಕೊನೆಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ