Select Your Language

Notifications

webdunia
webdunia
webdunia
webdunia

ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದ ಡ್ರೋನ್ ಪತ್ತೆ

ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದ ಡ್ರೋನ್ ಪತ್ತೆ
ಶ್ರೀನಗರ , ಶುಕ್ರವಾರ, 23 ಜುಲೈ 2021 (10:46 IST)
ಶ್ರೀನಗರ(ಜು.23): ಜಮ್ಮು ಕಾಶ್ಮೀರದಲ್ಲಿ ಸ್ಫೋಟಕ ತುಂಬಿಕೊಂಡು ಬಂದ ಡ್ರೋನ್ ಪತ್ತೆಯಾಗಿದೆ. ಭಾರತದಲ್ಲಿ ಇತ್ತೀಚೆಗೆ ಸ್ಫೋಟಕಗಳನ್ನು ತುಂಬಿಕೊಂಡು ಬಂದ ಡ್ರೋನ್ಗಳು ಪತ್ತೆಯಾಗಿದ್ದು ಇದೀಗ ಮತ್ತೆ ನಡೆದಿರುವ ಬೆಳವಣಿಗೆ ಆತಂಕ ಸೃಷ್ಟಿಸಿದೆ.

•ಭಾರೀ ಸ್ಫೋಟಕ ತುಂಬಿ ಬಂದಿದ್ದ ಡ್ರೋನ್ ಪತ್ತೆ
•ಜಮ್ಮು ಕಾಶ್ಮೀರದಲ್ಲಿ ಸ್ಫೋಟಕ ತುಂಬಿದ್ದ ಡ್ರೋನ್ ಹೊಡೆದುರುಳಿಸಿದ ಕಾಶ್ಮೀರ ಪೊಲೀಸ್

ಗಡಿಯೊಳಗೆ ಆರು ಕಿಲೋಮೀಟರ್ ದೂರದಲ್ಲಿರುವ ಜಮ್ಮು ಜಿಲ್ಲೆಯ ಕಾನಾ ಚಕ್ ಪ್ರದೇಶದಲ್ಲಿ ಹೆಕ್ಸಾಕೋಪ್ಟರ್ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ದೆಹಲಿ ಮೇಲೆ ಡ್ರೋನ್ ದಾಳಿ: ದೆಹಲಿಯಲ್ಲಿ ಹೈಅಲರ್ಟ್!
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಡ್ರೋನ್ ಸುಮಾರು 5 ಕೆಜಿ ಸ್ಫೋಟಕಗಳನ್ನು ಸಾಗಿಸುತ್ತಿತ್ತು. ಜೂನ್ 27 ರಂದು ಜಮ್ಮು ವಾಯುನೆಲೆಯಲ್ಲಿ ನಡೆದ ಅವಳಿ ಸ್ಫೋಟದ ನಂತರ ಹಲವಾರು ಡ್ರೋನ್ಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿದೆ.
ಇದೀಗ ಮತ್ತೆ ಡ್ರೋನ್ ಪತ್ತೆಯಾಗಿರುವುದು ಭದ್ರತೆಯ ಕುರಿತು ಆತಂಕ ಸೃಷ್ಟಿಸಿದೆ. ಆ.15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿಯಲ್ಲಿ ಉಗ್ರ ಸಂಘಟನೆಗಳು ಡ್ರೋನ್ ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ತನಿಖೆ : ಮತ್ತೆ ಚೀನಾದಿಂದ ಕ್ಯಾತೆ