Select Your Language

Notifications

webdunia
webdunia
webdunia
webdunia

ಕೋವಿಡ್ ತನಿಖೆ : ಮತ್ತೆ ಚೀನಾದಿಂದ ಕ್ಯಾತೆ

ಕೋವಿಡ್ ತನಿಖೆ : ಮತ್ತೆ ಚೀನಾದಿಂದ ಕ್ಯಾತೆ
ಬೀಜಿಂಗ್ , ಶುಕ್ರವಾರ, 23 ಜುಲೈ 2021 (10:36 IST)
ಬೀಜಿಂಗ್ (ಜು.23): ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಗೀಡಾಗಿರುವ ಚೀನಾ ಆ ಕುರಿತು ವಿಶ್ವ ಆರೋಗ್ಯ ಸಂಸ್ಥೆ  ನಡೆಸಲು ಉದ್ದೇಶಿಸಿರುವ 2ನೇ ಸುತ್ತಿನ ಅಧ್ಯಯನಕ್ಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದೆ.

•ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಗೀಡಾಗಿರುವ ಚೀನಾ
•ವಿಶ್ವ ಆರೋಗ್ಯ ಸಂಸ್ಥೆ  ನಡೆಸಲು ಉದ್ದೇಶಿಸಿರುವ 2ನೇ ಸುತ್ತಿನ ಅಧ್ಯಯನಕ್ಕೆ ಬಹಿರಂಗವಾಗಿಯೇ ವಿರೋಧ
ಅಲ್ಲದೇ ಚೀನಾದ ವುಹಾನ್ ಲ್ಯಾಬ್ನಿಂದಲೇ ವೈರಾಣು ಸೋರಿಕೆಯಾಗಿದೆ ವಿಶ್ವದಲ್ಲಿ ಕೊರೋನಾ ಕಾಣಿಸಿಕೊಳ್ಳುವ ಮೊದಲು ಆ ಲ್ಯಾಬಿನ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದರು ಎಂಬ ವಾದವನ್ನು ಅಲ್ಲಗಳೆದಿದೆ.
ಪ್ರಯೋಗಾಲಯಕ್ಕೆ ಸಂಬಂಧಿಸಿದ ನಿಯಂತ್ರಣಗಳನ್ನು ಚೀನಾ ಉಲ್ಲಂಘಿಸಿದೆ ಹಾಗೂ ವೈರಾಣು ಸೋರಿಕೆ ಮಾಡಿದೆ. ಈ ಕುರಿತು ಅದ್ಯಯನ ನಡೆಯಬೇಕಾಗಿದೆ ಎಂಬ  ಡಬ್ಲ್ಯು ಎಚ್ಒ ಪ್ರಸ್ತಾಪ ನಡಿ ದಿಗ್ಬ್ರಮೆಯಾಗಿದೆ. ಹೀಗಾಗಿ ವಿಸ್ವ ಆರೋಗ್ಯ ಸಂಸ್ಥೆಯ ಎರಡನೇ ಸುತ್ತಿನ ಅಧ್ಯಯನ ಯೋಜನೆಯನ್ನು ನಾವು ಪಾಲಿಸುವುದಿಲ್ಲ ಎಂದು ರಾಷ್ಟ್ರೀಯ ಅರೋಗ್ಯ ಆಯೋಗದ ಉಪ ಸಚಿವ ಚೆಂಗ್ ಯಿಕ್ಸಿನ್ ತಿಳಿಸಿದ್ದಾರೆ.
ಚೀನಾದ ಈ ರ್ಷಾರಂಭದಲ್ಲಿ 4 ವಾರಗಳ ಕಾಲ ಅಧ್ಯಯನ ನಡೆದಿದೆ. ಹೀಗಾಗಿ ಮುಂದಿನ ಸುತ್ತಿನಲ್ಲಿ ವಿವಿಧ ವಲಯ ಹಾಗು ದೇಶಗಳ ಬಗ್ಗೆ ಅಧ್ಯಯನ ನಡೆಯಬೇಕು. ಕೊರೋನಾ ವೈರಸ್ ವಿಶ್ವದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿತ್ತು. . ಆದರೆ ಅದನ್ನು 2019ರ ಡಿಸೆಂಬರ್ ನಲ್ಲಿ ಮೊದಲು ತಿಳಿಸಿದ್ದು ನಾವು ಅಷ್ಟೇ ಎಂಬ ವಾದವನ್ನು ಮುಂದಿಟ್ಟಿದೆ


Share this Story:

Follow Webdunia kannada

ಮುಂದಿನ ಸುದ್ದಿ

15,000 ವರ್ಷ ಹಳೆಯ ಹಿಮಗಡ್ಡೆಯಲ್ಲಿ ವೈರಸ್ ಪತ್ತೆ, ವಿಜ್ಞಾನಿಗಳಿಗೂ ಶಾಕ್!