Select Your Language

Notifications

webdunia
webdunia
webdunia
webdunia

ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ, ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳಿವೆ: ದ್ರೌಪದಿ ಮುರ್ಮು

ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ, ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳಿವೆ: ದ್ರೌಪದಿ ಮುರ್ಮು
ನವದೆಹಲಿ , ಮಂಗಳವಾರ, 15 ಆಗಸ್ಟ್ 2023 (09:28 IST)
ನವದೆಹಲಿ : ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ. ಪ್ರತಿ ಪ್ರಜೆಗೆ ಈ ಭೂಮಿಯಲ್ಲಿ ಸಮಾನ ಅವಕಾಶ, ಹಕ್ಕುಗಳು ಮತ್ತು ಕರ್ತವ್ಯಗಳಿವೆ. ಭಾರತೀಯ ಪ್ರಜೆಗಳಾಗಿ ಅವರ ಗುರುತುಗಳು ಜಾತಿ, ಧರ್ಮ ಮತ್ತು ಭಾಷೆಯ ಎಲ್ಲಾ ಗುರುತುಗಳನ್ನು ಮೀರಿಸುತ್ತವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ ಅವರು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಗಾಂಧಿ ಜೊತೆ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಇಂದು ಕೂಡಾ ಮಹಿಳೆಯರು ಪ್ರಮುಖ ಘಟ್ಟದಲ್ಲಿದ್ದಾರೆ. ಮಹಿಳಾ ಸಶಕ್ತಿಕರಣ ಅಗತ್ಯವಾಗಿದೆ ಎಂದರು.

 ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೇಶವಾಗಿದ್ದು, ಇಲ್ಲಿ ಹಲವು ಜಾತಿ, ಭಾಷೆ, ಪ್ರಾಂತ್ಯದ ಜನರು ಒಂದಾಗಿ ಬದುಕುತ್ತಿದ್ದೇವೆ. ಭಾರತೀಯ ನಾಗರಿಕರು ಎಂದು ಹೆಮ್ಮೆಯಿಂದ ಬದುಕುತ್ತಿದ್ದೇವೆ. ಸತ್ಯ, ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆಯಲಾಯಿತು. ಮಹಾತ್ಮ ಗಾಂಧಿ ದೇಶದ ಜನರಲ್ಲಿ ಸ್ವಾತಂತ್ರ್ಯವನ್ನು ಜಾಗೃತಗೊಳಿಸಿದರು ಎಂದು ಹೇಳಿದರು.

ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಜಿ20 ಸಭೆಯ ಅಧ್ಯಕ್ಷ ಸ್ಥಾನವನ್ನು ಭಾರತ ನಿಭಾಯಿಸುತ್ತಿದೆ. ಈ ಸಭೆ ಭಾರತದ ಪ್ರಗತಿಗೆ ಮತ್ತೊಂದು ರಸ್ತೆಯಾಗಿದೆ. ಭಾರತ ರಾಜತಾಂತ್ರಿಕತೆಯನ್ನು ನೆಲದೊಂದಿಗೆ ಜೊಡಿಸುವ ಪ್ರಯತ್ನ ಮಾಡಿದೆ. ಸಾಮಾನ್ಯ ಜನರನ್ನು ಸಭೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

10 ನೇ ಬಾರಿಗೆ ಧ್ವಜಾರೋಹಣ ಮಾಡಿ ದಾಖಲೆ ಮಾಡಿದ ಪ್ರಧಾನಿ ಮೋದಿ