Select Your Language

Notifications

webdunia
webdunia
webdunia
webdunia

ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇನೆಂದು ಸಿಧುಗೆ ಪತ್ನಿಯಿಂದ ಭಾವುಕ ಪತ್ರ

ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇನೆಂದು ಸಿಧುಗೆ ಪತ್ನಿಯಿಂದ ಭಾವುಕ ಪತ್ರ
ಚಂಡೀಗಢ , ಶುಕ್ರವಾರ, 24 ಮಾರ್ಚ್ 2023 (11:26 IST)
ಚಂಡೀಗಢ : ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಅವರು ತಮ್ಮ ಪತಿ ಜೈಲಿನಲ್ಲಿರುವ ಸಿಧುಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ನವಜೋತ್ ಕೌರ್ ಸಿಧು ಅವರಿಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿ, ತನಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಅಲ್ಲದೆ ಅದು ಎರಡನೇ ಹಂತದಲ್ಲಿದೆ.

ಜೈಲಿನಲ್ಲಿರುವ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇನೆ. ಆದರೆ ಅದು ಸಾಧ್ಯವಿಲ್ಲದ ಮಾತು. ನೀವು ಮಾಡಿರದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿಕೊಂಡು ಬಳಲುತ್ತಿದ್ದೀರಿ. ಬಹುಶಃ ನೀವು ಜೈಲಿನಲ್ಲಿ ಅನುಭವಿಸುವ ನೋವಿಗಿಂತ ನಾನು ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದೇನೆ ಎಂದು ಭಾವುಕರಾಗಿ ತಿಳಿಸಿದ್ದಾರೆ.

1988ರ ರಸ್ತೆಯಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲಿಗೆ ಹೋದ ಸಿಧು ಅವರಿಗೆ ಖೈದಿಗಳಂತೆ ಸಂಖ್ಯೆಯೊಂದನ್ನು ನೀಡಿ, 10ನೇ ಬ್ಯಾರಕ್ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಕೋರ್ಟ್ ಆವರಣದಲ್ಲೇ ಆ್ಯಸಿಡ್ ಎರಚಿದ ಪತಿ!