Select Your Language

Notifications

webdunia
webdunia
webdunia
webdunia

ವಿದ್ಯುತ್‌ ಕಳ್ಳತನ: ಎಸ್ಪಿ ಸಂಸದನಿಗೆ ಬರೋಬ್ಬರಿ ₹ 1.91 ಕೋಟಿ ದಂಡ, ಮನೆಗೆ ಕರೆಂಟ್‌ ಕಟ್‌

MP Ziaur Rehman Bark

Sampriya

ಉತ್ತರ ಪ್ರದೇಶ , ಶುಕ್ರವಾರ, 20 ಡಿಸೆಂಬರ್ 2024 (15:53 IST)
Photo Courtesy X
ಉತ್ತರ ಪ್ರದೇಶ: ವಿದ್ಯುತ್ ಕಳವು ಮಾಡಿದ ಆರೋಪದ ಹಿನ್ನಡೆಯಲ್ಲಿ ಉತ್ತರ ಪ್ರದೇಶದ ಸಂಭಾಲ್ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್  ಅವರಿಗೆ ಅಲ್ಲಿನ ಇಂಧನ ಇಲಾಖೆಯು ₹ 1.91 ಕೋಟಿ ರೂ ದಂಡ ವಿಧಿಸಿದೆ. ಜೊತೆಗೆ ಅವರ ಮನೆಗೆ ವಿದ್ಯುತ್ ಸ್ಥಗಿತಗೊಳಿಸಿದೆ.

ಸಂಭಾಲ್ ದೀಪಾ ಸರಾಯ್ನಲ್ಲಿರುವ ಜಿಯಾವುರ್ ರೆಹಮಾನ್ ಬಾರ್ಕ್ ಅವರು ತಮ ಮನೆಗೆ ಅಕ್ರಮ ಸಂಕರ್ಪ ಪಡೆದ ಹಿನ್ನಲೆಯಲ್ಲಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಜಿಯಾವುರ್ ರೆಹಮಾನ್ ವಿರುದ್ಧ ವಿದ್ಯುತ್ ಕಾಯ್ದೆ, 2003, (ವಿದ್ಯುತ್ ಕಳ್ಳತನ ಅಥವಾ ಅನಧಿಕೃತ ವಿದ್ಯುತ್ ಬಳಕೆ) ಸೆಕ್ಷನ್ 135 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿದ್ಯುತ್ ಪರೀಕ್ಷಾ ಪ್ರಯೋಗಾಲಯದಿಂದ ಪಡೆದ ಗ್ರಾಹಕರ ಮೀಟರ್ ಪರಿಶೀಲಿಸಿದಾಗ ಮೀಟರ್ ಬೈಪಾಸ್ ಮಾಡಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿ ವಿದ್ಯುತ್ ಕಳ್ಳತನ ಮಾಡಿರುವುದು ಸ್ಪಷ್ಟವಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.

ಭಾರೀ ಭದ್ರತೆಯ ನಡುವೆ ಸಂಸದರ ನಿವಾಸವನ್ನು ಇಲಾಖೆ ಪರಿಶೀಲನೆ ಕೂಡ ನಡೆಸಿತ್ತು. ಇದೇ ಪ್ರಕರಣದಲ್ಲಿ ನಿವಾಸದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ತಂದೆ ಮಾಮ್ಲುಕೂರ್ ರೆಹಮಾನ್ ಬಾರ್ಕ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಿಶೀಲನೆಯ ಸಮಯದಲ್ಲಿ, ಎಂಜಿನಿಯರ್‌ಗಳಾದ ಅಜಯ್ ಶರ್ಮಾ ಮತ್ತು ವಿ.ಕೆ. ಗಂಗಲ್ ಅವರು ಸಂಸದರ ತಂದೆಯಿಂದ ತಮಗೆ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ವಾಧಿಕಾರ ಬಹಳ ದಿನ ನಡೆಯುವುದಿಲ್ಲ, ನಮಗೂ ಒಂದು ಕಾಲ ಬರುತ್ತದೆ: ಸಿ.ಟಿ. ರವಿ ಆಕ್ರೋಶ