Select Your Language

Notifications

webdunia
webdunia
webdunia
webdunia

ಮುಂಜಾನೆ 3 ಬಾರಿ ನಡುಗಿದ ಭೂಮಿ! ನಿದ್ದೆಯಲ್ಲಿದ್ದ ಮಂದಿಗೆ ಶಾಕ್

ಮುಂಜಾನೆ 3 ಬಾರಿ ನಡುಗಿದ ಭೂಮಿ! ನಿದ್ದೆಯಲ್ಲಿದ್ದ ಮಂದಿಗೆ ಶಾಕ್
ಜೈಪುರ , ಶುಕ್ರವಾರ, 21 ಜುಲೈ 2023 (10:47 IST)
ಜೈಪುರ : ಸುಮಾರಿಗೆ ರಾಜಸ್ಥಾನದ ಜೈಪುರದಲ್ಲಿ ಇಂದು (ಶುಕ್ರವಾರ) ಮುಂಜಾನೆ 4 ಗಂಟೆ ಸುಮಾರಿಗೆ ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆಯನ್ನು 4.4 ರಿಕ್ಟರ್ ಮಾಪಕದಲ್ಲಿ ಅಳೆಯಲಾಗಿದೆ. ದೆಹಲಿ-ಎನ್ಸಿಆರ್ ನಲ್ಲೂ ಭೂಕಂಪನದ ಅನುಭವವಾಗಿದೆ.

ಭೂಕಂಪನಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ರಾಷ್ಟ್ರೀಯ ಭೂಕಂಪನಶಾಸ್ತ್ರದ ಪ್ರಕಾರ, ಮುಂಜಾನೆ 4:10ಕ್ಕೆ ಮೊದಲ ಬಾರಿ (3.01 ತೀವ್ರತೆ), 4:23ಕ್ಕೆ 2ನೇ ಬಾರಿ (3.4 ತೀವ್ರೆತೆ) ಹಾಗೂ 4:25ಕ್ಕೆ ಮೂರನೇ ಬಾರಿ (4.4 ತೀವ್ರತೆ) ಭೂಮಿ ಕಂಪಿಸಿದೆ.  ಜೈಪುರದ ಜನರು ಈ ವೇಳೆ ಗಾಢ ನಿದ್ದೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಇಡೀ ನಗರ ನಡುಗಿದ್ದು, ಜನ ಭಯದಿಂದ ಮನೆಗಳಿಂದ ಹೊರಬಂದಿದ್ದಾರೆ.

ರಾಸ್ಪ್ಬೆರಿ ಶೇಕ್ ಎಂಬ ಖಾಸಗಿ ಭೂಕಂಪನ ಸಂಸ್ಥೆಯ ಪ್ರಕಾರ, ಜೈಪುರದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಶ್ರೀಮಂತ ನಂ.1 ಶಾಸಕ ಯಾರು ಗೊತ್ತ?