ಹಿಮಾಚಲ ಪ್ರದೇಶ: ದುಬೈ ವೈಮಾನಿಕ ಪ್ರದರ್ಶನದ ವೇಳೆ ಎಲ್ಸಿಎ ತೇಜಸ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮನ್ಶ್ ಸಿಯಾಲ್ ಅವರ ಪಾರ್ಥಿವ ಶರೀರವನ್ನು ಭಾನುವಾರ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಅವರ ಹುಟ್ಟೂರಾದ ಪಟಿಯಲ್ಕರ್ ಗ್ರಾಮಕ್ಕೆ ತರಲಾಯಿತು.
ಅಲ್ಲಿ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶುಕ್ರವಾರ ದುಬೈ ಏರ್ ಶೋ 2025ರಲ್ಲಿ ಸಂಭವಿಸಿದ ಅಪಘಾತದಲ್ಲಿ ಫೈಲೆಟ್ ನಮನ್ಶ್ ಸಿಯಾಲ್ ಸಾವನ್ನಪ್ಪಿದರು.
ಅವರ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ಅಂತಿಮ ಸಂಸ್ಕಾರಕ್ಕೆ ಮುಂದಾಗಿದ್ದಾರೆ.
ಸ್ಥಳೀಯ ನಿವಾಸಿ ಸಂದೀಪ್ ಕುಮಾರ್ ಅವರು ಎಎನ್‌ಐಗೆ ಪ್ರತಿಕ್ರಿಯಿಸಿ, "ನಾವು ನಮನಶ್, ಪಾಟಿಯಾಳ್ಕರ್ ಅವರು ಒಂದೇ ಗ್ರಾಮದವರು. ನಮ್ಮ ಹಳ್ಳಿಯಲ್ಲಿ ಎಲ್ಲರೂ ದುಃಖಿತರಾಗಿದ್ದಾರೆ. ಅವರು ನಮ್ಮ ಕಿರಿಯ ಸಹೋದರರಂತೆ ಇದ್ದರು. ಅವರು ನಮ್ಮ ಶಾಲೆಯ ಹೆಮ್ಮೆಯಾಗಿದ್ದರು. ನಾವು ಅವರ ಹುಟ್ಟೂರಾದ ಪಟಿಯಾಲ್ಕರ್‌ಗೆ ಹೋಗುತ್ತೇವೆ ಎಂದು ದುಃಖ ವ್ಯಕ್ತಪಡಿಸಿದರು.