ನವದೆಹಲಿ (ಆ. 27): ದೇಶದಲ್ಲಿ ಮನಸೋ ಇಚ್ಛೆ ಡ್ರೋಣ್ ಹಾರಾಟಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ನಾಗರಿಕ ವಿಮಾನಯಾನ ಸಚಿವಾಲಯ ಡ್ರೋಣ್ ಕಾರ್ಯಾಚರಣೆ ಸಂಬಂಧ ಹೊಸ ನಿಯಮಗಳನ್ನು ಹೊರಡಿಸಿದೆ. ಈ ಹೊಸ ಡ್ರೋನ್ ನಿಯಮಗಳು ದೇಶದ ಈ ಕ್ಷೇತ್ರದ ಮಹತ್ವದ ಕ್ಷಣಕ್ಕೆ ನಾಂದಿ ಹಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ.