Select Your Language

Notifications

webdunia
webdunia
webdunia
webdunia

'ರಾಷ್ಟ್ರೀಯ ನಗದೀಕರಣ ಯೋಜನೆ' ಘೋಷಿಸಿದ ಕೇಂದ್ರ

'ರಾಷ್ಟ್ರೀಯ ನಗದೀಕರಣ ಯೋಜನೆ' ಘೋಷಿಸಿದ ಕೇಂದ್ರ
ನವದೆಹಲಿ , ಮಂಗಳವಾರ, 24 ಆಗಸ್ಟ್ 2021 (15:03 IST)
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 'ರಾಷ್ಟ್ರೀಯ ನಗದೀಕರಣ ಯೋಜನೆ'(ಎನ್ಎಂಪಿ) ಘೋಷಿಸಿದ್ದಾರೆ.

6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು. ಈ ಪಟ್ಟಿಯಲ್ಲಿ ಪ್ರಮುಖವಾಗಿ ರಸ್ತೆಗಳು, ರೈಲ್ವೆ ಹಾಗೂ ವಿದ್ಯುತ್ ಗ್ರಿಡ್ಗಳೂ ಸೇರಿವೆ. ಆದರೆ ಭೂಮಿ ಮಾರಾಟ ಈ ಪಟ್ಟಿಯಲ್ಲಿ ಸೇರಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ನಗದೀಕರಣ ಯೋಜನೆ ಅಡಿ 2022ರ ಹಣಕಾಸು ವರ್ಷದಿಂದ 2025 ರ ಹಣಕಾಸು ವರ್ಷದವರೆ ಮುಂದಿನ ನಾಲ್ಕು ವರ್ಷಗಳಲ್ಲಿ ಮೂಲಸೌಕರ್ಯ ಆಸ್ತಿಗಳನ್ನು ಮಾರಾಟ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಎನ್ಎಂಪಿ ಸರ್ಕಾರದ ಬ್ರೌನ್ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ ನಾಲ್ಕು ವರ್ಷಗಳ ಪೈಪ್ಲೈನ್ ಅನ್ನು ಒಳಗೊಂಡಿದೆ. ಕೇಂದ್ರ ಬಜೆಟ್ 2021-22 ರಲ್ಲಿ, ಸರ್ಕಾರವು ಮೂಲಸೌಕರ್ಯಕ್ಕಾಗಿ ನವೀನ ಮತ್ತು ಪರ್ಯಾಯ ಹಣಕಾಸು ಸಂಗ್ರಹಿಸುವ ಸಾಧನವಾಗಿ ಆಸ್ತಿ ಗಳಿಕೆಯ ಮೇಲೆ ಹೆಚ್ಚಿನ ಒತ್ತು ನೀಡಿತು ಮತ್ತು ಹಲವಾರು ಪ್ರಮುಖ ಘೋಷಣೆಗಳನ್ನು ಒಳಗೊಂಡಿದೆ.
"ರಾಷ್ಟ್ರೀಯ ನಗದೀಕರಣ ಪೈಪ್ಲೈನ್ ಅನ್ನು ಯಶಸ್ವಿಯಾಗಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಉತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿ ವಲಯಕ್ಕೆ ಪ್ರವೇಶಿಸುವುದು ಬಹಳ ಮುಖ್ಯ ಎಂದು ನಾವು ಭಾವಿಸುತ್ತೇವೆ. ಮತ್ತು ಅದಕ್ಕಾಗಿ ನಾವು ಕಷ್ಟಪಟ್ಟು ಕೆಲಸ ಮಾಡಲು ಬದ್ಧರಾಗಿದ್ದೇವೆ. " ಎಂದು ಇದೇ ಸಂದರ್ಭದಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂಧನ ಪೂರೈಸುವಂತೆ ಇರಾನಿಗೆ ತಾಲಿಬಾನ್ ಮನವಿ