Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಕೋವ್ಯಾಕ್ಸಿನ್, ಪ್ರಯೋಗಕ್ಕೂ ಮುನ್ನವೇ ಅನುಮತಿ ಸಾಧ್ಯತೆ

ಮಕ್ಕಳಿಗೆ ಕೋವ್ಯಾಕ್ಸಿನ್, ಪ್ರಯೋಗಕ್ಕೂ ಮುನ್ನವೇ ಅನುಮತಿ ಸಾಧ್ಯತೆ
ಬೆಂಗಳೂರು , ಸೋಮವಾರ, 23 ಆಗಸ್ಟ್ 2021 (09:46 IST)
ಬೆಂಗಳೂರು: ಮಕ್ಕಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ಮತ್ತು ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡಲಿವೆ ಎಂದು ಮೂಲಗಳು ಹೇಳಿವೆ.

ಕ್ಲಿನಿಕಲ್ ಪ್ರಯೋಗದ ಅವಧಿ ಪೂರ್ಣಗೊಳ್ಳುವುದಕ್ಕೂ ಮೊದಲೇ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಐಎಎಎನ್ಎಸ್' ವರದಿ ಮಾಡಿದೆ.
ಲಸಿಕೆಯ ಎರಡು ಡೋಸ್ ಪಡೆದ ಮಕ್ಕಳಲ್ಲಿ ಸೃಷ್ಟಿಯಾಗಿರುವ ಪ್ರತಿಕಾಯಗಳ ಪರಿಣಾಮಕಾರಿತ್ವದ ಬಗ್ಗೆ ಮೂರನೇ ಬಾರಿ ಪರಿಶೀಲಿಸಲು ರಕ್ತದ ಮಾದರಿಗಳನ್ನು ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ 90 ಮಕ್ಕಳನ್ನು ಕೋವ್ಯಾಕ್ಸಿನ್ ಪ್ರಯೋಗಕ್ಕೆ ಒಳಪಡಿಸಲಾಗಿದೆ.
ಪ್ರಯೋಗ ಪೂರ್ಣಗೊಳ್ಳಲು ಇನ್ನೂ 210 ದಿನಗಳು ಬೇಕಿವೆ. ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು 5ರಿಂದ 6 ತಿಂಗಳು ಬೇಕಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಅಷ್ಟೊಂದು ಸಮಯ ಕಾಯುವುದು ಕಷ್ಟ ಎಂದು ವರದಿ ಹೇಳಿದೆ.
'210ನೇ ದಿನ ಅಂತಿಮ ವರದಿ ಬರಲಿದೆ. ಸರ್ಕಾರ ಮತ್ತು ಡಿಸಿಜಿಐ 56ನೇ ದಿನದ ಬಳಿಕ ಯಾವುದೇ ಕ್ಷಣದಲ್ಲಿಯೂ ಮಕ್ಕಳಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಆದಾಗ್ಯೂ ಪ್ರಯೋಗವು 210 ದಿನಗಳ ಕಾಲ ನಡೆಯಲಿದೆ. ಈ ಹಿಂದೆ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಾಗಲೂ ಸರ್ಕಾರ ಮತ್ತು ಡಿಸಿಜಿಐ 210 ದಿನಗಳ ಕಾಲ ಕಾದಿರಲಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಲುಗಳ ಊತ ಈ ಕಾಯಿಲೆಗಳ ಲಕ್ಷಣ