Select Your Language

Notifications

webdunia
webdunia
webdunia
webdunia

ಬಾಲಕರಿಗೆ ಮೂತ್ರ ಕುಡಿಸಿ, ಖಾಸಗಿ ಭಾಗಕ್ಕೆ ಮೆಣಸಿನಕಾಯಿ ಹಾಕಿ ದೌರ್ಜನ್ಯ

ಬಾಲಕರಿಗೆ ಮೂತ್ರ ಕುಡಿಸಿ, ಖಾಸಗಿ ಭಾಗಕ್ಕೆ ಮೆಣಸಿನಕಾಯಿ ಹಾಕಿ ದೌರ್ಜನ್ಯ
ಲಕ್ನೋ , ಭಾನುವಾರ, 6 ಆಗಸ್ಟ್ 2023 (15:07 IST)
ಲಕ್ನೋ : ಇಬ್ಬರು ಅಪ್ರಾಪ್ತ ಬಾಲಕರಿಗೆ ಬಲವಂತವಾಗಿ ಮೂತ್ರಿ ಕುಡಿಸಿ, ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಬಾಲಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಭಯಾನಕ ದೃಶ್ಯದ ವೀಡಿಯೋಗಳು ವೈರಲ್ ಆಗಿದೆ. ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದರು ಎನ್ನಲಾಗಿದೆ. 

ವೀಡಿಯೋದಲ್ಲಿ ಹುಡುಗರಿಗೆ ಹಸಿರು ಮೆಣಸಿನಕಾಯಿ ತಿನ್ನಿಸುತ್ತಿರುವ, ಬಾಟಲಿಯಲ್ಲಿ ತುಂಬಿದ ಮೂತ್ರದೊಂದಿಗೆ ಅದನ್ನು ಸೇವಿಸಲು ಬಲವಂತಪಡಿಸುತ್ತಿರುವ ದೃಶ್ಯ ಇದೆ. ಪುಂಡರ ಗುಂಪು ಬಾಲಕರನ್ನು ನಿಂದಿಸುವುದರ ಜೊತೆಗೆ ಮೂತ್ರವನ್ನು ಕುಡಿಯದಿದ್ದರೆ ಥಳಿಸುವುದಾಗಿ ಬೆದರಿಕೆ ಹಾಕುತ್ತಿರುವ ದೃಶ್ಯ ಸೆರೆಯಾಗಿದೆ.

ಮತ್ತೊಂದು ವೀಡಿಯೋದಲ್ಲಿ, ಹುಡುಗರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು, ಪ್ಯಾಂಟನ್ನು ಕೆಳಕ್ಕೆ ಎಳೆದುಕೊಂಡು ನೆಲದ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 KG ಗಾಂಜಾ ಪೊಲೀಸರ ವಶಕ್ಕೆ