Publish Date: Fri, 16 Dec 2022 (08:54 IST)
Updated Date: Fri, 16 Dec 2022 (08:56 IST)
ಪಾಟ್ನಾ: ಯಾರು ಮದ್ಯಪಾನ ಮಾಡುತ್ತಾರೋ ಅವರು ಸಾಯುತ್ತಾರೆ. ಈ ಪ್ರಕರಣ ನಮಗೆ ಉದಾಹರಣೆ ಆಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.
ಬಿಹಾರದ ಛಾಪ್ರಾದಲ್ಲಿ ಕಳ್ಳಬಟ್ಟಿ ಸೇವಿಸಿ 37 ಮಂದಿ ಬಲಿಯಾದ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ಯ ಸೇವಿಸುವವರು ಸಾಯುತ್ತಾರೆ. ಜನರು ಜಾಗರೂಕರಾಗಿರಬೇಕು ಎಂದ ಅವರು, ಕಳ್ಳಬಟ್ಟಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದರು.
ಮದ್ಯ ನಿಷೇಧದ ಬಗ್ಗೆ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆದರೆ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಷೇಧವಿರುವಾಗ ಮಾರಾಟವಾಗುವ ಮದ್ಯದಲ್ಲಿ ಏನಾದರೂ ತಪ್ಪು ಇರುತ್ತದೆ. ಹೀಗಾಗಿ ನೀವು ಮದ್ಯ ಸೇವಿಸಬಾರದು. ಹೆಚ್ಚಿನ ಜನರು ನಿಷೇಧ ನೀತಿಯನ್ನು ಒಪ್ಪಿದ್ದಾರೆ. ಆದರೆ ಕೆಲವರು ತಪ್ಪು ಮಾಡುತ್ತಾರೆ ಅವರು ವಾದಿಸಿದರು.
ಛಾಪ್ರಾ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಳ್ಳಬಟ್ಟಿ ಸೇವಿಸಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದು, ಇನ್ನಷ್ಟು ಸಾವು ಸಂಭವಿಸುವ ಭೀತಿ ಎದುರಾಗಿದೆ.