Select Your Language

Notifications

webdunia
webdunia
webdunia
webdunia

ಒಮಿಕ್ರಾನ್ ಸೋಂಕು ಬಗ್ಗೆ ನಿರ್ಲಕ್ಷ್ಯ ಬೇಡ!

ಒಮಿಕ್ರಾನ್  ಸೋಂಕು ಬಗ್ಗೆ ನಿರ್ಲಕ್ಷ್ಯ ಬೇಡ!
ನವದೆಹಲಿ , ಶನಿವಾರ, 15 ಜನವರಿ 2022 (14:20 IST)
ಜನವರಿ ಮೊದಲ ವಾರದಲ್ಲಿ ಕೂಡ ಒಮಿಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಘೇಬ್ರೆಯೇಸಸ್ ಮಾತನಾಡಿ, ‘ಒಮಿಕ್ರಾನ್ ಕೋವಿಡ್ ರೂಪಾಂತರಿ ವೈರಸ್ ಜಗತ್ತಿನಾದ್ಯಂತ ಜನರನ್ನು ಕೊಲ್ಲುತ್ತಿದೆ.
 
ಇದೊಂದು ಸೌಮ್ಯ ಸೋಂಕು ಎಂದು ಕಡೆಗಣಿಸುವಂತಿಲ್ಲ ಎಂದಿದ್ದರು. ‘ಲಸಿಕೆ ಪಡೆದವರಲ್ಲಿ, ಡೆಲ್ಟಾಗಿಂತ ಒಮಿಕ್ರೋನ್ ಸೌಮ್ಯವಾಗಿ ಕಾಣುತ್ತಿದೆ. ಆದರೆ ಹಾಗಂತ ಅದನ್ನು ಸೌಮ್ಯ ಸೋಂಕು ಎಂದು ವರ್ಗೀಕರಿಸಲಾಗದು’ ಎಂದು ಹೇಳಿದ್ದರು.

ಈ ಮೂಲಕ ಲಸಿಕೆ ಪಡೆಯದವರಿಗೆ ಇದು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ಅವರು ಪರೋಕ್ಷವಾಗಿ ನೀಡಿದ್ದರು.

‘ಒಮಿಕ್ರೋನ್ ಸೋಂಕು ಈ ಹಿಂದಿನ ರೂಪಾಂತರಿಗಳಂತೇ ವೇಗವಾಗಿ ವ್ಯಾಪಿಸುತ್ತಿದೆ. ಹಲವು ದೇಶಗಳಲ್ಲಿ 2ನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರಿ ವಿರುದ್ಧ ಸ್ಪರ್ಧಿಸುತ್ತಿದೆ.

ಈ ಹಿಂದಿನ ರೂಪಾಂತರಿ ವೈರಸ್ಗಳಂತೆ ಇದೂ ಜನರನ್ನು ಕೊಲ್ಲುತ್ತಿದೆ. ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತಿದೆ. ಹೀಗಾಗಿ ಅದನ್ನು ಸೌಮ್ಯ ಸೋಂಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವ ವ್ಯಕ್ತಿಗಳಿಗೆ ಇದು ಮಾರಕವಾಗಬಹುದು’ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಸಿಕೆ ಪಡೆಯದವರಿಗೆ ಒಮಿಕ್ರಾನ್ ಅಪಾಯಕಾರಿ!