Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಜನವರಿ ಅಂತ್ಯದಲ್ಲಿ ವೇಳೆಗೆ 3ನೇ ಅಲೆ!

ಭಾರತದಲ್ಲಿ ಜನವರಿ ಅಂತ್ಯದಲ್ಲಿ ವೇಳೆಗೆ 3ನೇ ಅಲೆ!
ನವದೆಹಲಿ , ಶನಿವಾರ, 8 ಜನವರಿ 2022 (08:30 IST)
ಯೂರೋಪ್ ನಲ್ಲಿ ನಿತ್ಯ 16 ಲಕ್ಷದವರೆಗೂ ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿವೆ.

ಭಾರತದಲ್ಲೂ ಜನವರಿ ಅಂತ್ಯದ ವೇಳೆಗೆ ಕೊರೊನಾದ ಮೂರನೇ ಅಲೆ ತುತ್ತುತುದಿಗೆ ಏರಬಹುದು ಎಂದು ಬೆಂಗಳೂರಿನ ಐಐಎಸ್ಸಿ ಹಾಗೂ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ ಟಿಟ್ಯೂಟ್ ತಜ್ಞರು ಹೊಸ ಮಾಡೆಲಿಂಗ್ ಅಧ್ಯಯನ ನಡೆಸಿ ಲೆಕ್ಕಾಚಾರ ಹಾಕಿದ್ದಾರೆ.

ಹಿಂದಿನ ಸೋಂಕು ಮತ್ತು ವ್ಯಾಕ್ಸಿನೇಷನ್ ನಿಂದಾಗಿ ಜನಸಂಖ್ಯೆಯ ಒಂದಷ್ಟು ಭಾಗವು ಹೊಸ ರೂಪಾಂತರ ಕೊರೊನಾ ವೈರಸ್ ಗೆ ತುತ್ತಾಗಬಹುದು. ಜನಸಂಖ್ಯೆಯ 30%, 60% ಅಥವಾ 100% ಜನರು ಕೊರೊನಾ ಸೋಂಕಿಗೆ ಒಳಗಾಗುತ್ತಾರೆ ಎಂದು ಮಾದರಿ ಪರಿಗಣಿಸಿದೆ.

ವೈರಸ್‌ಗೆ ಒಳಗಾಗುವ ಜನರ ಶೇಕಡಾವಾರು ಪ್ರಮಾಣವನ್ನು ಅವಲಂಬಿಸಿ, ಭಾರತದಲ್ಲಿ ದೈನಂದಿನ ಪ್ರಕರಣಗಳು ಗರಿಷ್ಠ ಸಮಯದಲ್ಲಿ ಸುಮಾರು 3 ಲಕ್ಷ, 6 ಲಕ್ಷ ಅಥವಾ 10 ಲಕ್ಷ ಆಗಿರಬಹುದು.

ಡಿಸೆಂಬರ್ ಅಂತ್ಯದಿಂದ, ಭಾರತವು ಕೊರೊನಾ ವೈರಸ್ ಪ್ರಕರಣಗಳಲ್ಲಿ ಹಠಾತ್ ಏರಿಕೆಗೆ ಸಾಕ್ಷಿಯಾಗಿದೆ. ಆದರೆ, ಕೇಂದ್ರ ಸರ್ಕಾರ ಇದನ್ನು ಹೊಸ ಅಲೆ ಎಂದು ಕರೆಯದೆ ದೂರ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿಥಿ ಉಪನ್ಯಾಸಕರ ಸಮಸ್ಯೆಗೆ ಪರಿಹಾರ ಸಿಕ್ಕೇ ಬಿಡ್ತ?