Publish Date: Fri, 19 Nov 2021 (09:45 IST)
Updated Date: Fri, 19 Nov 2021 (09:47 IST)
ಲಕ್ನೋ: ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. 10 ತಿಂಗಳ ಮಗುವಿನ ಮೇಲೆ ಮನೆಗೆಲಸದಾತನೇ ಅತ್ಯಾಚಾರವೆಸಗಿದ ಹೇಯ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.
ಘಟನೆಯಿಂದಾಗಿ ಮಗುವಿನ ಜನನಾಂಗಕ್ಕೆ ತೀವ್ರ ಗಾಯವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮನೆ ಕೆಲಸ ಮಾಡುತ್ತಿದ್ದ 18 ವರ್ಷದ ಯುವಕ ಆರೋಪಿ. ತಾಯಿ ಅಡುಗೆ ಮನೆಯಲ್ಲಿದ್ದಾಗ ಆರೋಪಿ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಗು ಜೋರಾಗಿ ಅಳುತ್ತಿರುವ ಸದ್ದು ಕೇಳಿ ಬೆಡ್ ರೂಂಗೆ ಬಂದು ನೋಡಿದಾಗ ಆರೋಪಿ ಅರೆ ನಗ್ನಾವಸ್ಥೆಯಲ್ಲಿದ್ದ. ಮಗುವಿನ ಜನನಾಂಗದಿಂದ ರಕ್ತ ಸೋರುತ್ತಿತ್ತು. ತಕ್ಷಣವೇ ಆರೋಪಿಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದರೂ ಆತ ಪರಾರಿಯಾಗಿದ್ದ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ.