Select Your Language

Notifications

webdunia
webdunia
webdunia
webdunia

ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನ ತಿಂದು ಮುಗಿಸಿದ್ದ ಬೀದಿ ನಾಯಿಗಳು..!

ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನ ತಿಂದು ಮುಗಿಸಿದ್ದ ಬೀದಿ ನಾಯಿಗಳು..!
ಭೋಪಾಲ್ , ಸೋಮವಾರ, 27 ಮಾರ್ಚ್ 2017 (17:58 IST)
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ ಬೀದಿ ನಾಯಿಗಳಿಗೆ ಆಹಾರವಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜಘಡ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ 72 ವರ್ಷದ ವೃದ್ಧೆ ಮಾರ್ಚ್ 22ರಿಂದ ಕಾಣೆಯಾಗಿದ್ದರು. ಮಹಿಳೆ ಎಲ್ಲಿ ಹೋಗಿದ್ದಾರೆಂಬ ಬಗ್ಗೆ ಸುಳಿವೂ ಸಿಕ್ಕಿರಲಿಲ್ಲ. ಇವತ್ತು ಶೌಚಾಲಯ ರಿಪೇರಿಗೆ ಬಂದಿದ್ದ  ಸಫಾಯಿ ಕೆಲಸಗಾರರಿಗೆ ಶೌಚಾಲಯದ ಗುಂಡಿ ಬಳಿ ಮಹಿಳೆಯ ತಲೆ ಮತ್ತು ದೇಹದ ಮೇಲ್ಭಾಗ ಸಿಕ್ಕಿದೆ. ಊಳಿದ ದೇಹದ ಬಾಗವನ್ನ ನಾಯಿಗಳು ತಿಂದು ಮುಗಿಸಿವೆ.

ಮಹಿಳೆಯನ್ನ ಎಳೆದಾಡಿರುವ ಗುರುತುಗಳೂ ಪತ್ತೆಯಾಗಿದ್ದು, ಆಕೆ ಜೀವಂತವಾಗಿದ್ದಾಗಲೇ ನಾಯಿಗಳ ಪಾಲಾದಳೇ..? ಯಾರಾದರೂ ಬೇಕಂತಲೇ ಈ ಕೃತ್ಯ ನಡೆಸಿದರೇ ಎಂದು ತನಿಖೆ ನಡೆಸುತ್ತಿರುವುದಾಗಿ ಕೊತ್ವಾಲಿ ಪೊಲೀಸರು ತಿಳಿಸಿದ್ದಾರೆ.

ಕಳೆದ 10 ತಿಂಗಳಲ್ಲಿ ನಡೆದಿರುವ 5ನೇ ಕಾಣೆ ಪ್ರಕರಣ ಇದಾಗಿದ್ದು, ಆಸ್ಪತ್ರೆ ಸಿಬ್ಬಂದಿ ಮೇಲೆ ಅನುಮಾನ ಮೂಡತೊಡಗಿದೆ. ನಾಯಿಗಳಿಗೆ ಆಹಾರವಾದ ಮಹಿಳೆಯನ್ನ ಬಿಸ್ಮಿಲ್ಲಾ ಬಾಯಿ ಎಂದು ಗುರ್ತಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಸರ್ ಬಾರಿಸುವುದು ಅಂದ್ರೆ ಹಣ ಹಂಚುವುದಾ?: ಖಾದರ್‌ಗೆ ಬಿಎಸ್‌ವೈ ಗುಡುಗು