Publish Date: Mon, 06 Feb 2017 (17:22 IST)
Updated Date: Mon, 06 Feb 2017 (17:25 IST)
ಜಯಲಲಿತಾ ಸಾವಿನ ಕುರಿತಾಗಿ ಕಳೆದ 2 ತಿಂಗಳಿನಿಂದ ಎದ್ದಿದ್ದ ಊಹಾಪೋಹಕ್ಕೆ ವೈದ್ಯ ರಿಚರ್ಡ್ ಬೀಲೆ ತೆರೆ ಎಳೆದಿದ್ದಾರೆ. ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತೀವ್ರ ಮಧುಮೇಹದಿಂದ ಬಳಲುತ್ತಿದ್ದ ಜಯಲಲಿತಾ ತೀವ್ರ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ, ಬಹು ಅಂಗಾಂಗ ವೈಫಲ್ಯ ಮತ್ತು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಇದೇವೇಳೆ, ಜಯಲಲಿತಾ ಫೋಟೋಗಳನ್ನ ರಿಲೀಸ್ ಮಾಡಲಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ಇದು ತೀವ್ರ ನಿಗಾ ಘಟಕದಲ್ಲಿದ್ದ ರೋಗಿಯ ವೈಯಕ್ತಿಕ ವಿಷಯವಾಗಿರುವುದರಿಂದ ನಾವೇ ನಿರ್ಬಂಧಿಸಿದ್ದೆವು ಎಂದು ಹೇಳಿದ್ದಾರೆ. ಜಯಲಲಿತಾಗೆ ಅತ್ಯುತ್ತಮ ಚಿಕಿತ್ಸೆಯನ್ನೇ ನೀಡಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಈ ಮಧ್ಯೆ, ಮರುಮರಣೋತ್ತರ ಪರೀಕ್ಷೆ ನಡೆಸುವ ಕುರಿತಂತೆ ಕೋರ್ಟ್ ಇಟ್ಟಿದ್ದ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯರು, ಇದು ಹಾಸ್ಯಾಸ್ಪದ ಎಂದಿದ್ದಾರೆ.