Select Your Language

Notifications

webdunia
webdunia
webdunia
webdunia

ಆಪರೇಷನ್ ಮಾಡಿದ ವೈದ್ಯರಿಗೆ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದೇನು ಗೊತ್ತಾ?!

ಆಪರೇಷನ್ ಮಾಡಿದ ವೈದ್ಯರಿಗೆ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದೇನು ಗೊತ್ತಾ?!
ಅಹಮ್ಮದಾಬಾದ್ , ಬುಧವಾರ, 14 ನವೆಂಬರ್ 2018 (10:46 IST)
ಅಹಮ್ಮದಾಬಾದ್: ಮಹಿಳೆಯೊಬ್ಬರನ್ನು ಆಪರೇಷನ್ ಮಾಡಿದ ವೈದ್ಯರು ಆಕೆಯ ಹೊಟ್ಟೆಯಿಂದ ತಾಳಿ ಸರ, ಬಳೆ, ಕೃತಕ ಉಗುರು ಮುಂತಾದ ವಸ್ತುಗಳನ್ನು ಹೊರ ತೆಗೆದಿದ್ದಾರೆ!

ಈ ಮೆಟಲ್ ವಸ್ತುಗಳು ಸುಮಾರು 1.5 ಕೆ.ಜಿಯಷ್ಟು ಆಕೆಯ ಹೊಟ್ಟೆಯಲ್ಲಿತ್ತು ಎಂದು ವೈದ್ಯರು ಹೇಳಿದ್ದಾರೆ. ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಈ ವಿಚತ್ರ ಘಟನೆ ನಡೆದಿದ್ದು, ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ತಿಳಿದುಬಂದಿದೆ.

ಸುಮಾರು 40 ವರ್ಷ ವಯಸ್ಸಿನ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಆಕೆಯ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿದಾಗ ಮೆಟಲ್ ವಸ್ತುಗಳು ಇರುವುದು ಪತ್ತೆಯಾಯಿತು. ಹೀಗಾಗಿ ಸುಮಾರು ಎರಡು ಗಂಟೆಗಳ ಕಾಲ ಆಪರೇಷನ್ ಮಾಡಿದ ವೈದ್ಯರು ಹೇರ್ ಪಿನ್, ಸೇಫ್ಟಿ ಪಿನ್, ತಾಳಿ ಸರ, ಬಳೆ ಮುಂತಾದ ವಸ್ತುಗಳನ್ನು ಹೊರತೆಗೆದಿದ್ದಾರೆ. ಇದೀಗ ವೈದ್ಯರು ಈಕೆಯ ಕುಟುಂಬದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಯಲ್ಲಾಪುರ ವಿದ್ಯಾರ್ಥಿಗಳ ಪೋಷಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇಕೆ ಗೊತ್ತಾ?