ಉತ್ತರಪ್ರದೇಶ : ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ  ವಿಚಿತ್ರವಾದ ಕಾಯಿಲೆಗಳು ಬರುತ್ತಿದೆ. ಆದರೆ ಉತ್ತರ ಪ್ರದೇಶದ ಹಾರ್ಡೊಯ್ ನಲ್ಲಿ ಹೊಟ್ಟೆ ನೋವಿನಿಂದ ಬಂದ ಪುರುಷನೊಬ್ಬನ ಹೊಟ್ಟೆಯೊಳಗೆ ಇದ್ದ ವಸ್ತುವನ್ನು ಕಂಡು ಒಂದು ಕ್ಷಣ ವೈದ್ಯರೇ ದಂಗಾಗಿದ್ದಾರೆ.
									
			
			 
 			
 
 			
					
			        							
								
																	
ಹೌದು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 40 ವರ್ಷದ ಶರೀಫ್ ಅಲಿ  ಎಂಬಾತ ಹೊಟ್ಟೆ ನೋವು ತಾಳಲಾರದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾನೆ. ಆದರೆ ತಪಾಸಣೆ ನಡೆಸಿ ಹೊಟ್ಟೆ ಸ್ಕ್ಯಾನಿಂಗ್  ಮಾಡಿಸಿದ  ವೈದ್ಯರು ಆತನ ಹೊಟ್ಟೆಯಲ್ಲಿರುವ  ವಸ್ತುವನ್ನು ಕಂಡು ಆಶ್ವರ್ಯಕ್ಕೊಳಗಾಗಿದ್ದಾರೆ.
									
										
								
																	
ಯಾಕೆಂದರೆ ಆ ಪುರುಷನ ಹೊಟ್ಟೆಯಲ್ಲಿ ಗರ್ಭಕೋಶವಿರುವುದು ಕಂಡುಬಂದಿದೆ. ಅಲ್ಲದೇ ಆ ಗರ್ಭಕೋಶ ಸಂಪೂರ್ಣವಾಗಿ  ಬೆಳವಣಿಗೆ ಕೂಡ ಹೊಂದಿತ್ತು. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭಕೋಶವನ್ನು ಹೊರಗೆ ತೆಗೆದಿದ್ದಾರೆ. ಅಲ್ಲದೇ ಇಂತಹ ಸಮಸ್ಯೆ ಲಕ್ಷದಲ್ಲಿ ಒಬ್ಬರಿಗೆ ಕಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.