Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಸರ್ಕಾರದಲ್ಲಿ ಕೆಲಸ ಮಾಡಬಯಸುತ್ತೀರಾ? ಇಲ್ಲಿ ಅರ್ಜಿ ಸಲ್ಲಿಸಿ

ನರೇಂದ್ರ ಮೋದಿ ಸರ್ಕಾರದಲ್ಲಿ ಕೆಲಸ ಮಾಡಬಯಸುತ್ತೀರಾ? ಇಲ್ಲಿ ಅರ್ಜಿ ಸಲ್ಲಿಸಿ
ನವದೆಹಲಿ , ಗುರುವಾರ, 25 ಆಗಸ್ಟ್ 2016 (12:06 IST)
ನೀವು ಮೋದಿ ಸರ್ಕಾರದಲ್ಲಿ ಕೆಲಸ ಮಾಡ ಬಯಸುತ್ತೀರಾ? ಡಿಜಿಟಲ್ ಇಂಡಿಯಾ- ಮೈ ಗವ್ (digital India –myGov) ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಇತ್ತೀಚಿನ ಉಪಕ್ರಮಕ್ಕೆ ಲಾಗ್-ಇನ್ ಆದಾಗ ನೀವು ಮೊದಲು ಕಾಣುವುದು ಈ ಸಾಲುಗಳನ್ನು.
ಸರ್ಕಾರ- ನಾಗರಿಕ ಸಂಪರ್ಕ ವೇದಿಕೆಯಡಿಯಲ್ಲಿ ಸರ್ಕಾರ ಕೇಂದ್ರ ಸಚಿವಾಲಯಗಳ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಲು ಸಿದ್ಧರಿರುವ ತಜ್ಞರ ಅರ್ಜಿಯನ್ನು ಕೇಳುತ್ತಿದೆ. ವಿವಿಧ ಹಿರಿತನದ ಹಂತಗಳಲ್ಲಿ (ಸೀನಿಯರ್ ಲೆವಲ್) ಸಂಪಾದಕೀಯ ಬರಹಗಾರರು, ಸಂಶೋಧಕರು, ತಂತ್ರಾಂಶ ಅಭಿವರ್ಧಕರು (ಸಾಫ್ಟವೇರ್ ಡೆವಲಪರ್ಸ್), ಮಾಹಿತಿ ವಿಜ್ಞಾನಿಗಳು (ಡೇಟಾ ಸೈಂಟಿಸ್ಟ್), ಗ್ರಾಫಿಕ್ ವಿನ್ಯಾಸಕರು, ಸ್ಕ್ರಿಪ್ಟ್ ಬರಹಗಾರರು, ಅಪ್ಲಿಕೇಶನ್ ಡೆವಲಪರ್ ಮತ್ತು ಇತರ ಹಲವು ತಜ್ಞರನ್ನು ಬಯಸಿದೆ.
 
ಈ ಅವಕಾಶಕ್ಕೆ ನೀವು ಕೂಡ ಪ್ರಯತ್ನಿಸಬೇಕೆಂದಿದ್ದರೆ, ಯಾವ ಸ್ಥಾನದಲ್ಲಿ ನೀವು ಆಸಕ್ತರಾಗಿರುವಿರಿ ಎಂಬುದನ್ನು ಅರ್ಜಿಯ ಮೊದಲ ಪುಟದಲ್ಲಿ ಉಲ್ಲೇಖಿಸಿ ವಿವರವಾದ ಅರ್ಜಿಯನ್ನು ಪಿಡಿಎಫ್ ರೂಪದಲ್ಲಿ ಕಳುಹಿಸಿ. 
 
ಅರ್ಜಿ ಸಲ್ಲಿಸಲು ನೀವು ಕಾಮೆಂಟ್ ಬಾಕ್ಸ್‌ನಲ್ಲಿರುವ ಸಂಬಂಧಿತ ಸ್ಥಾನದ ಹ್ಯಾಶ್ಟ್ಯಾಗ್ ಬಳಸಬಹುದು ಮತ್ತು ನಂತರ ಅರ್ಜಿಯನ್ನು ಅಪ್ಲೋಡ್ ಮಾಡಬಹುದು.
 
ಉದಾಹರಣೆಗೆ, ನೀವು ಅಕಾಡೆಮಿಕ್ ಎಕ್ಸಪರ್ಟ್ ಸ್ಥಾನಕ್ಕೆ ಅರ್ಜಿ ಸಲ್ಲಿಸ ಬಯಸಿದರೆ, ಕಮೆಂಟ್ ಬಾಕ್ಸ್‌ನಲ್ಲಿ  #AcademicExpert Resume Attached( #ಶೈಕ್ಷಣಿಕ ತಜ್ಞ ಅರ್ಜಿಯನ್ನು ಲಗತ್ತಿಸಲಾಗಿದೆ) ಎಂದು ಬರೆದು ಪಿಡಿಎಫ್ ರೂಪದಲ್ಲಿ ಅರ್ಜಿಯನ್ನು ಸಲ್ಲಿಸಿ. 
 
ಅರ್ಜಿಯನ್ನು MyGov ಪರಿಶೀಲಿಸುತ್ತದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಹೆಚ್ಚಿನ ಚರ್ಚೆ/ ಸಂದರ್ಶನಕ್ಕಾಗಿ ಸಂಪರ್ಕಿಸಬಹುದು. ಸಂಬಳದ ಬಗ್ಗೆ ನೇರ ಮಾತುಕತೆಗಳಲ್ಲಿ ಚರ್ಚಿಸಲಾಗುವುದು.
 
ಆದಾಗ್ಯೂ, ಈ ವೇದಿಕೆಯಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ಉದ್ಯೋಗ ಖಾತರಿಯಲ್ಲ ಎನ್ನುವುದನ್ನು ಅರ್ಜಿದಾರರು ಗಮನದಲ್ಲಿರಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪರ ಹೇಳಿಕೆ ನೀಡುವವರು ದೇಶದ್ರೋಹಿಗಳು: ಡಿ.ವಿ.ಸದಾನಂದಗೌಡ