ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ದಿನವೇ ಅವರಿಗೆ ಉಡುಗೊರೆಯಾಗಿ ನೀಡಿದ 1,300ಕ್ಕೂ ಹೆಚ್ಚು ವಸ್ತುಗಳನ್ನು ಇ-ಹರಾಜಿನಲ್ಲಿ ಇಡಲಾಗಿದೆ.
ಹರಾಜಿನಲ್ಲಿ ಅಯೋಧ್ಯಾ ರಾಮ ಮಂದಿರ ಮಾದರಿ, ಭವಾನಿ ದೇವಿಯ ವಿಗ್ರಹ, 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸ್ಮರಣಿಕೆಗಳು ಸೇರಿದಂತೆ 1,300ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜಿನಲ್ಲಿಡಲಾಗಿದೆ.
ಇಂದು ಆರಂಭಗೊಂಡ ಹರಾಜು ಪ್ರಕ್ರಿಯೆ ಅ.೨ರ ವರೆಗೆ ಹರಾಜು ನಡೆಯಲಿದೆ. ಪಿಎಂ ಮೊಮೆಂಟೋಸ್ ವೆಬ್‌ಸೈಟ್ ಪ್ರಕಾರ, ಭವಾನಿ ದೇವಿಯ ಪ್ರತಿಮೆಯ ಬೆಲೆ 1,03,95,000 ರೂ. ಆಗಿದ್ದು, ರಾಮ ಮಂದಿರ ದೇವಾಲಯದ ಮಾದರಿ 5.5 ಲಕ್ಷ ರೂ. ಮೌಲ್ಯವನ್ನು ಹೊಂದಿದೆ.
ಇನ್ನು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಮೂರು ಜೊತೆ ಶೂಗಳನ್ನು ಕೂಡ ಹರಾಜಿಗಿಡಲಾಗಿದ್ದು, ಪ್ರತಿ ಶೂ ಬೆಲೆ 7.7 ಲಕ್ಷ ರೂ. ಇರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 2019ರ ಜನವರಿಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರಿಗೆ ನೀಡಿದ್ದ ಉಡುಗೊರೆಗಳ ಇ-ಹರಾಜನ್ನು ನಡೆಸಲಾಗಿತ್ತು.