ತಂಗಿ, ತಂಗಿ ಎಂದು ಕರೆದು ಏನು ಮಾಡಿದ ಗೊತ್ತಾ?

Webdunia
ಸೋಮವಾರ, 10 ಜೂನ್ 2019 (15:47 IST)
ತಂಗಿ, ತಂಗಿ  ಎಂದು ಕರೆದು ನಂತರ ಅದೇ ಯುವತಿಯೊಂದಿಗೆ ಓಡಿಹೋಗಿ ಯುವಕನೊಬ್ಬ ವಿವಾಹವಾದ ವಿಚಿತ್ರ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ.
ಸಂಗಾರೆಡ್ಡಿಯ ಶಾಂತಿನಗರ ಬಡಾವಣೆಯ ನಿವಾಸಿಯಾದ 21 ವರ್ಷದ ಇಂತಿಯಾಜ್ ನಾಂಪಲ್ಲಿ ಬೇಕರಿಯಲ್ಲಿ ಉದ್ಯೋಗದಲ್ಲಿದ್ದನು. ಉದ್ಯೋದ ಅವಧಿ ಮುಗಿದ ನಂತರ ಹತ್ತಿರದಲ್ಲಿರುವ ತಮ್ಮ ಸಂಬಂಧಿಕರಾದ ಸಯ್ಯದ್ ಅಲಿ ಮನೆಗೆ ಬಂದು ಹೋಗುತ್ತಿದ್ದನು.
 
ಸಂಬಂಧಿಕರ ಮನೆಗೆ ನಿರಂತರವಾಗಿ ತೆರಳುತ್ತಿದ್ದ ಇಂತಿಯಾಜ್, ಸಂಬಂಧಿಕರ 19 ವರ್ಷದ ಪುತ್ರಿಯನ್ನು ತಂಗಿ ತಂಗಿ ಎಂದು ಕರೆಯುತ್ತಿದ್ದನು. ತಂಗಿ ಎಂದು ಕರೆಯುತ್ತಿದ್ದರಿಂದ ಯುವತಿಯ ಮನೆಯವರು ಅನುಮಾನ ಪಟ್ಟಿರಲಿಲ್ಲ. ಕೆಲ ದಿನಗಳ ನಂತರ ಯುವತಿಯನ್ನು ವಿವಾಹವಾಗುವುದಾಗಿ ಯುವತಿಯ ಪೋಷಕರಿಗೆ ತಿಳಿಸಿದ್ದಾನೆ. ಆದರೆ, ಯುವತಿಯ ಮನೆಯವರು ಒಪ್ಪಿರಲಿಲ್ಲ. ಪೋಷಕರಿಂದ ಯಾವುದೇ ಸಹಾಯ ದೊರೆಯುವುದಿಲ್ಲ ಎಂದು ಅರಿತು ಯುವತಿಯೊಂದಿಗೆ ಓಡಿ ಹೋಗಿ ಸದಾಶಿವನಗರದ ಮಸೀದಿಯೊಂದರಲ್ಲಿ ವಿವಾಹವಾಗಿದ್ದಾನೆ. 
 
ಯುವತಿ ಮನೆಯಿಂದ ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಿಮ್ಮ ಪುತ್ರಿ ಮತ್ತು ಇಂತಿಯಾಜ್ ವಿವಾಹವಾಗಿದ್ದಾರೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಯುವಕ ಮತ್ತು ಯುವತಿಯ ಕೌನ್ಸಿಲಿಂಗ್ ಕೂಡಾ ಪೊಲೀಸರು ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಪೋಷಕರು ಯುವತಿಯನ್ನು ನಮ್ಮೊಂದಿಗೆ ಕಳುಹಿಸಿಕೊಡಿ ನಾವೇನು ಮಾಡುವುದಿಲ್ಲ ಎಂದು ಪೊಲೀಸರಿಗೆ ಭರವಸೆ ನೀಡಿದ್ದಾರೆ.
 
ಪೋಷಕರ ಮಾತು ನಂಬಿದ ಪೊಲೀಸರು ದಂಪತಿಯನ್ನು ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಹಾಗೇ ತೆರಳುತ್ತಿರುವ ಸಂದರ್ಭದಲ್ಲಿ ವಾಹನ ಅಮೀರ್‌ಪೇಟ್‌ ಹತ್ತಿರ ಬರುತ್ತಿದ್ದಂತೆ ಹತ್ತು ಮಂದಿ ಯುವಕರು ದಂಪತಿ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಇಂತಿಯಾಜ್ ಗಂಭೀರವಾಗಿ ಗಾಯಗೊಂಡರೆ ಯುವತಿ ಸಾವನ್ನಪ್ಪಿದ್ದಾಳೆ.
 
ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಉಡುಪಿ ಕೃಷ್ಣನ ಭೇಟಿಗೆ ಬರಲಿದ್ದಾರೆ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments