Select Your Language

Notifications

webdunia
webdunia
webdunia
webdunia

ಪ್ರೇಯಸಿ ವೇಶ್ಯೆಯೊಂದಿಗೆ ಜೀವನ ನಡೆಸಲು ಯುವಕ ಮಾಡಿದ್ದೇನು ಗೊತ್ತಾ?

Mistress
delhi , ಸೋಮವಾರ, 20 ನವೆಂಬರ್ 2023 (08:37 IST)
ತನ್ನ ಪ್ರೇಯಸಿಯ ಜತೆ ಬಾಂಗ್ಲಾದಲ್ಲಿ ಜೀವನ ಸಾಗಿಸುವ ಉದ್ದೇಶವನ್ನು ಸಾಕಾರಗೊಳಿಸಲು ಆತ, ತನ್ನ ಸ್ನೇಹಿತೆಯಾದ  32 ವರ್ಷದ  ಶಗುಪ್ತಾ ಖಾನ್ ಎಂಬಾಕೆಯನ್ನು ಕೊಂದು ಹಣ ಲಪಟಾಯಿಸುವ ಯೋಜನೆ ರೂಪಿಸಿದ. ಮಾರ್ವೆ ರಸ್ತೆಯಲ್ಲಿರುವ ರುಸ್ತೋಮ್ಜೀ ಟವರ್ ನಲ್ಲಿರುವ ಆಕೆಯ ಅಪಾರ್ಟಮೆಂಟ್ ಗೆ ಹೋಗಿ ಹರಿತವಾದ ಆಯುಧದಿಂದ ಆಕೆಯ ಹತ್ಯೆ ಮಾಡಿದ.

ಗಂಡನಿಂದ ದೂರವಾಗಿದ್ದ ಆಕೆ ತನ್ನ 5 ಮತ್ತು 11 ವರ್ಷದ ಪುಟ್ಟ ಹೆಣ್ಣು ಮಕ್ಕಳ ಮುಂದೆಯೇ ಕೊನೆಯುಸಿರೆಳೆದಳು.  ಆರೋಪಿಯನ್ನು ಸೆರೆ ಹಿಡಿಯಲು ಅಪರಾಧ ವಿಭಾಗದ ಪೊಲೀಸರು ಬಾಂಗ್ಲಾ - ಭಾರತ ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಾಗಿದೆ. 
 
ಪ್ರೇಯಸಿಯ ಜತೆ ಬಾಂಗ್ಲಾದೇಶಕ್ಕೆ ಹೋಗಿ ವಾಸ್ತವ್ಯ ಹೂಡುವ ನಿರ್ಧಾರ ಮಾಡಿದ ಮೊಬೈಲ್ ತಂತ್ರಜ್ಞನೊಬ್ಬ ತನ್ನ ಸ್ನೇಹಿತೆಯನ್ನು ಕೊಂದು, ಹಣ ಲಪಟಾಸಿದ ಘಟನೆ ಗುರಗಾಂವ್ ನಲ್ಲಿ ನವೆಂಬರ್ 12ರಂದು ನಡೆದಿದೆ.
 
ಆರೋಪಿಯನ್ನು ಗುರುತಿಸಲಾಗಿದ್ದು, ಮೊಬೈಲ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ. ಗ್ರಾಂಟ್ ರಸ್ತೆಯಲ್ಲಿ ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾ ದೇಶಿಯ ಮಹಿಳೆಯನ್ನು ಆತ ಪ್ರೀತಿಸಿದ್ದ. ಪ್ರತಿದಿನ ಆಕೆಯನ್ನು ಭೇಟಿ ಮಾಡುತ್ತಿದ್ದ ಆತ  15 ದಿನಗಳ ಹಿಂದೆ ಆಕೆಯನ್ನು ಬಾಂಗ್ಲಾಕ್ಕೆ ಕರೆದೊಯ್ದು ಬಿಟ್ಟಿದ್ದ ಮತ್ತು ತನ್ನ ಮೊಬೈಲ್‌ನ್ನು ಆಕೆಗೆ ಕೊಟ್ಟು  ಎರಡು ವಾರಗಳಲ್ಲಿ ನಾನು ಹಿಂತಿರುಗಿ ಬರುತ್ತೇನೆ. ನಾವು ಇಲ್ಲಿಯೇ ವಾಸ್ತವ್ಯ ಹೂಡೋಣ ಎಂಬ ಭರವಸೆ ನೀಡಿ ಭಾರತಕ್ಕೆ ಹಿಂತಿರುಗಿದ್ದ.  

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಜಾತಿಯವನೊಂದಿಗೆ ಪ್ರೀತಿ: ಪುತ್ರಿಯನ್ನೇ ಹತ್ಯೆಗೈದ ಪೋಷಕರು