Webdunia - Bharat's app for daily news and videos

Install App

ವಿದ್ಯಾರ್ಥಿನಿಯರ ಫ್ಯಾಶನ್ ವ್ಯಾಮೋಹಕ್ಕೆ ಶಿಕ್ಷಕ ಏನ್ ಮಾಡಿದ ಗೊತ್ತೇ?

Webdunia
ಗುರುವಾರ, 28 ಡಿಸೆಂಬರ್ 2023 (08:47 IST)
ವಿದ್ಯಾರ್ಥಿನಿಯರು ಓದುವ ಸಮಯದಲ್ಲಿ ಓದಿನತ್ತ ಗಮನಕೊಡಬೇಕೇ ಹೊರತು ಫ್ಯಾಶನ್‌ನತ್ತಲ್ಲ ಎನ್ನುವ ಭಾವನೆ ಹೊಂದಿದ್ದ ಶಿಕ್ಷಕನೊಬ್ಬ, ಫ್ಯಾಶನ್‌ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಮಾಡಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಿ.
 
ವಿದ್ಯಾರ್ಥಿನಿಯರ  ಕೂದಲನ್ನು ಕತ್ತರಿಸಿದಂತೆ ಎಷ್ಟು ಮನವಿ ಮಾಡಿಕೊಂಡರೂ, ಪ್ರತಿಭಟಿಸಿದರೂ ಆತ ಪೊಲೀಸರು ಸ್ಥಳಕ್ಕಾಗಮಿಸುವವರೆಗೂ ಕೂದಲನ್ನು ಕತ್ತರಿಸುವುದನ್ನು ನಿಲ್ಲಿಸಲೇ ಇಲ್ಲ. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿಕ್ಷಕ ಅವರು ಅತಿಯಾಗಿ ಫ್ಯಾಷನ್ ಮಾಡುತ್ತಿದ್ದರು. ಓದಿನ ಕಡೆ ಗಮನ ಹರಿಸುತ್ತಿರಲಿಲ್ಲ ಎಂದ ಶಿಕ್ಷಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.
 
ಅತಿಯಾಗಿ ಫ್ಯಾಷನ್ ಮಾಡಿದ್ದಾರೆಂದು ಶಿಕ್ಷಕರೊಬ್ಬರು 6 ಮಂದಿ ವಿದ್ಯಾರ್ಥಿಗಳ ಕೂದಲನ್ನು ಕಟ್ ಮಾಡಿದ ಖಂಡನೀಯ ಘಟನೆ ಛತ್ತೀಸ್‌ಗಢದ ರಾಯಘಡದಲ್ಲಿ ನಡೆದಿದೆ. ಈ ಕೃತ್ಯವೆಸಗಿರುವ ಶಿಕ್ಷಕ ಈಗ ಪೊಲೀಸ್ ಠಾಣೆಯಲ್ಲಿದ್ದಾರೆ. 
 
ನಹರ್ಪಲ್ಲಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಭೂಪ್‌ದಿಯೋಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣಿತ ಶಿಕ್ಷಕನಾಗಿದ್ದು, ಪುಷ್ಪೇಂದರ್ ಪಟೇಲ್ ಎಂದು ಆತನನ್ನು ಗುರುತಿಸಲಾಗಿದೆ. 
 
ಘಟನೆಯಿಂದ ದಿಗ್ಭ್ರಾಂತರಾದ ಶಾಲಾ ವ್ಯವಸ್ಥಾಪಕ ಮಂಡಳಿ ಮತ್ತು ಬಾಲಕಿಯರ ಪೋಷಕರು ಪಟೇಲ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮೆರಿಕಾಗೆ ತಕ್ಕ ತಿರುಗೇಟು ಕೊಟ್ಟ ಭಾರತ: ಯುದ್ಧ ವಿಮಾನ ಖರೀದಿ ಡೀಲ್ ಕ್ಯಾನ್ಸಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಧರ್ಮಸ್ಥಳದಲ್ಲಿ ಇಂದು ಯಾವ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ

ಡೊನಾಲ್ಡ್ ಟ್ರಂಪ್ ದುಬಾರಿ ಸುಂಕ ಇಂದಿನಿಂದ ಜಾರಿಗೆ: ಭಾರತದ ಯಾವ ಉದ್ಯಮಗಳಿಗೆ ಹೊಡೆತ

ಮುಂದಿನ ಸುದ್ದಿ
Show comments